ಕರ್ನಾಟಕ

karnataka

ETV Bharat / bharat

ಕಾಶ್ಮೀರಿ ಪಂಡಿತನ ಹತ್ಯೆ :  ಪ್ರಧಾನಿ - ಅಮಿತ್​ ಶಾ  ವಿರುದ್ಧ ಆಕ್ರೋಶ - ಸಾಮೂಹಿಕ ರಾಜೀನಾಮೆ ಬೆದರಿಕೆ - ಕಾಶ್ಮೀರದಲ್ಲಿ ಮೋದಿ ವಿರೋಧಿ ಘೋಷಣೆ

ರಾಹುಲ್ ಭಟ್ ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು. ಅವರ ಮಕ್ಕಳು ಶಿಕ್ಷಣವನ್ನು ಸರ್ಕಾರವೇ ನೋಡಿಕೊಳ್ಳಬೇಕು. ಅವರ ಪತ್ನಿಗೆ ಜಮ್ಮುವಿನಲ್ಲಿ ಸರ್ಕಾರಿ ಉದ್ಯೋಗ ನೀಡಬೇಕು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

Pandits threaten mass resignation after Rahul Bhat's killing
ಕಾಶ್ಮೀರಿ ಪಂಡಿತನ ಹತ್ಯೆ ಪ್ರಕರಣ: ಸಾಮೂಹಿಕ ರಾಜೀನಾಮೆಯ ಬೆದರಿಕೆ

By

Published : May 13, 2022, 2:49 PM IST

Updated : May 13, 2022, 4:01 PM IST

ಶ್ರೀನಗರ( ಜಮ್ಮು ಕಾಶ್ಮೀರ):ಕಾಶ್ಮೀರದಲ್ಲಿ ಪಂಡಿತರ ಹತ್ಯೆಗಳು ಆಗಾಗ ಜರುಗುತ್ತಿವೆ. ಆದರೆ, ರಾಹುಲ್ ಭಟ್ ಹತ್ಯೆ ಮಾತ್ರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಬದ್ಗಾಮ್ ಜಿಲ್ಲೆಯ ಚದೂರದಲ್ಲಿ ತಮ್ಮ ಕಚೇರಿಯೊಳಗೆ ಉಗ್ರಗಾಮಿಗಳಿಂದ ಹತ್ಯೆಗೀಡಾದ ರಾಹುಲ್ ಭಟ್ ಅವರ ಹತ್ಯೆಯನ್ನು ವಿರೋಧಿಸಿ ಶುಕ್ರವಾರ ನೂರಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನಾಕಾರರು ಶ್ರೀನಗರ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಮುಖ ರಸ್ತೆಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿರುವುದು ಮಾತ್ರವಲ್ಲದೇ, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿ, ತಮಗೆ ಸೂಕ್ತ ಭದ್ರತೆ ಒದಗಿಸದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.

ತ್ರೀವ್ರ ಸ್ವರೂಪ ಪಡೆದುಕೊಂಡ ಪ್ರತಿಭಟನೆ:ಒಂದು ಸಮಯದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಪ್ರಯೋಗ ಮಾಡಿದರು. ಈ ವೇಳೆ ನಾಲ್ವರು ಪ್ರತಿಭಟನಾಕಾರರನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ರಾಹುಲ್ ಭಟ್ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಮುಂದಾಗಲಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ನಾವು 11 ಗಂಟೆಯವರೆಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಗಾಗಿ ಕಾಯುತ್ತಿದ್ದೆವು. ಆದರೆ, ಅವರು ಬರಲಿಲ್ಲ. ಲೆಫ್ಟಿನೆಂಟ್ ಗವರ್ನರ್ ಸ್ಥಳಕ್ಕೆ ಭೇಟಿ ನೀಡಬೇಕು. ನಮ್ಮ ಸುರಕ್ಷತೆ ಮತ್ತು ನ್ಯಾಯದ ಬಗ್ಗೆ ನಮಗೆ ಭರವಸೆ ನೀಡಬೇಕು ಎಂದು ನಾವು ಆಡಳಿತ ಮತ್ತು ಪೊಲೀಸರಿಗೆ ತಿಳಿಸಿದ್ದೇವೆ. ಆದರೆ, ಅವರು ನಮ್ಮನ್ನು ಭೇಟಿ ಮಾಡಲಿಲ್ಲ ಎಂದು ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆ.

1 ಕೋಟಿ ಪರಿಹಾರ ನೀಡಿ:ರಾಹುಲ್ ಭಟ್ ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು. ಅವರ ಮಕ್ಕಳು ಶಿಕ್ಷಣವನ್ನು ಸರ್ಕಾರವೇ ನೋಡಿಕೊಳ್ಳಬೇಕು. ಅವರ ಪತ್ನಿಗೆ ಜಮ್ಮುವಿನಲ್ಲಿ ಸರ್ಕಾರಿ ಉದ್ಯೋಗ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಪ್ರತಿಭಟನಾಕಾರೊಬ್ಬರು ಹೇಳಿಕೆ ನೀಡಿದ್ದು, ಪ್ರಧಾನಿಯ ಮೇಲೆ ಸಾಕಷ್ಟು ಭರವಸೆಗಳನ್ನು ಹೊಂದಿದ್ದೆವು. ಆದರೆ, ಅವರು ನಮ್ಮ ನಿರೀಕ್ಷೆಗಳನ್ನು ತಲುಪಲು ವಿಫಲರಾಗಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಕಾಶ್ಮೀರಿ ಪಂಡಿತನ ಹತ್ಯೆ ಖಂಡಿಸಿ ಆಕ್ರೋಶ

ಪ್ರಧಾನಮಂತ್ರಿ ಪುನರ್ವಸತಿ ಪ್ಯಾಕೇಜ್ ಸಂಪೂರ್ಣ ವಿಫಲವಾಗಿದೆ. ನಮಗೆ ಈ ಕೆಲಸ ಬೇಡ. ಸಾಮೂಹಿಕ ರಾಜೀನಾಮೆ ನೀಡಲು ನಾವು ಸಿದ್ಧರಿದ್ದೇವೆ. ನಮ್ಮನ್ನು ಜಮ್ಮುವಿಗೆ ವರ್ಗಾಯಿಸಬೇಕು ಮತ್ತು ಅಲ್ಲಿ ಕೆಲಸ ಮಾಡಲು ಅನುಮತಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನಾಕಾರರು ಪ್ರಮುಖ ರಸ್ತೆಯನ್ನು ತಡೆಯಲು ಯತ್ನಿಸಿದಾಗ ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ನಂತರ ಲಾಠಿ ಚಾರ್ಜ್ ಕೂಡಾ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬದ್ಗಾಮ್‌ಗೆ ಬರುವ ಮತ್ತು ಬದ್ಗಾಮ್​ನಿಂದ ಬೇರೆಡೆ ಇರುವ ರಸ್ತೆ ಸಂಚಾರ ಪಥವನ್ನು ಬದಲಿಸಲಾಗಿದೆ. ಇದೇ ರೀತಿಯ ಪ್ರತಿಭಟನೆಗಳು ದಕ್ಷಿಣ ಕಾಶ್ಮೀರದ ಮಟ್ಟಾನ್ ಮತ್ತು ವೆಸ್ಸು ಗ್ರಾಮಗಳಲ್ಲಿ ನಡೆದಿರುವ ಬಗ್ಗೆ ವರದಿಗಳು ಬಂದಿವೆ.

ಅಂದಹಾಗೆ, ರಾಹುಲ್ ಭಟ್ ಅವರು ಪಂಡಿತ್ ಸಮುದಾಯಕ್ಕೆ ಸೇರಿದವರಾಗಿದ್ದು, ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸುವ ಪ್ರಧಾನ ಮಂತ್ರಿಗಳ ವಿಶೇಷ ಪ್ಯಾಕೇಜ್ ಅಡಿ ಕಂದಾಯ ಅಧಿಕಾರಿಯಾಗಿ ನೇಮಿಸಲಾಗಿತ್ತು. ಆಗಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಈ ಯೋಜನೆಯನ್ನು ಪ್ರಾರಂಭಿಸಿದ ನಂತರ ಸುಮಾರು 6 ಸಾವಿರಕ್ಕೂ ಹೆಚ್ಚು ಮಂದಿಗೆ ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಉದ್ಯೋಗವನ್ನು ನೀಡಲಾಗಿದೆ. ಕೆಲಸ ಪಡೆದ ಉದ್ಯೋಗಿಗಳು ಕಾಶ್ಮೀರದಾದ್ಯಂತ ಕೆಲಸ ಮಾಡಲು ಪ್ರಾರಂಭಿಸಿದರೂ, ವಿವಿಧ ಸ್ಥಳಗಳಲ್ಲಿ ಅವರಿಗೆ ಭದ್ರತೆ ನೀಡಲಾಗಿತ್ತು.

ಇದನ್ನೂ ಓದಿ:ಉಗ್ರರಿಂದ ಹತ್ಯೆಗೆ ಒಳಗಾದ ಕಾಶ್ಮೀರಿ ಪಂಡಿತ್ ಅಂತ್ಯಸಂಸ್ಕಾರ ವೇಳೆ ಭಾರಿ ಪ್ರತಿಭಟನೆ : ಪೊಲೀಸರಿಂದ ಅಶ್ರುವಾಯು

Last Updated : May 13, 2022, 4:01 PM IST

ABOUT THE AUTHOR

...view details