ನವದೆಹಲಿ: ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡು ಆರ್ಜೆಡಿ+ಕಾಂಗ್ರೆಸ್ ಜೊತೆ ಕೈಜೋಡಿಸಿರುವ ನಿತೀಶ್ ಕುಮಾರ್ ಬಿಹಾರದಲ್ಲಿ ಹೊಸ ಸರ್ಕಾರ ರಚನೆ ಮಾಡಿದ್ದಾರೆ. ಇದರ ಮಧ್ಯೆ ವಿವಿಧ ರಾಜ್ಯಗಳಲ್ಲಿ ನಿತೀಶ್ ಕುಮಾರ್ಗೆ ದೊಡ್ಡ ಶಾಕ್ ಎದುರಾಗ್ತಿದೆ. ಕಳೆದ ಕೆಲ ದಿನಗಳ ಹಿಂದೆ ಮಣಿಪುರದಲ್ಲಿ ಜೆಡಿಯು ಪಕ್ಷದ ಐವರು ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದರು. ಇದರ ಬೆನ್ನಲ್ಲೇ ಇದೀಗ ದಮನ್ ಮತ್ತು ದಿಯುನಲ್ಲಿ 15 ಪಂಚಾಯ್ತಿ ಸದಸ್ಯರು ಕಮಲ ಮುಡಿದಿದ್ದಾರೆ.
ನಿತೀಶ್ ಕುಮಾರ್ ಅವರು ಬಿಜೆಪಿ ತೊರೆದಿರುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ದಮನ್ ಮತ್ತು ದಿಯುನ ಜೆಡಿಯು ಘಟಕದ 17 ಜಿಲ್ಲಾ ಪಂಚಾಯ್ತಿ ಸದಸ್ಯರ ಪೈಕಿ 15 ಮಂದಿ ನಿನ್ನೆ ಬಿಜೆಪಿ ಸೇರಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಾರ್ಟಿ ಖುದ್ದಾಗಿ ಟ್ವೀಟ್ ಮಾಡಿದ್ದು, ಫೋಟೋ ಹಂಚಿಕೊಂಡಿದೆ. ಬಿಹಾರದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡ್ತಿದ್ದ ಬಿಜೆಪಿ ತೊರೆದು, ಭ್ರಷ್ಟರಾಗಿರುವ ಕಾಂಗ್ರೆಸ್ ಹಾಗೂ ಆರ್ಜೆಡಿ ಜೊತೆ ನಿತೀಶ್ ಕುಮಾರ್ ಕೈಜೋಡಿಸಿದ್ದಾರೆ. ಅವರ ನಿರ್ಧಾರಕ್ಕೆ ನಮ್ಮ ವಿರೋಧವಿದೆ ಎಂದು ಜಿಪಂ ಸದಸ್ಯರು ತಿಳಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿ ಸೇರಿದ ಐವರು ಜೆಡಿಯು ಶಾಸಕರು.. ನಿತೀಶ್ ಕುಮಾರ್ಗೆ ಬಿಗ್ ಶಾಕ್