ಉತ್ತರಕಾಶಿ (ಉತ್ತರಾಖಂಡ): ಗಂಗೋತ್ರಿ ಧಾಮದಲ್ಲಿ ಹಿಂದೂ ಧಾರ್ಮಿಕ ವಿಧಿವಿಧಾನಗಳ ಮೂಲಕ ವಿದೇಶಿ ಜೋಡಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪವಿತ್ರ ಧಾಮದಲ್ಲಿರುವ ಭಗೀರಥ ಬಂಡೆಯ ಮೇಲೆ ಪುರೋಹಿತರು ವಿಧಿವತ್ತಾಗಿ ಪೂಜೆ ಸಲ್ಲಿಸಿ ಜೋಶ್ ಗೊಂಜಾಲೆನ್ ಮತ್ತು ಫಿಲಿಸಬೆತ್ ವಿವಾಹೋತ್ಸವ ನೆರವೇರಿಸಿದರು.
ಗಂಗೋತ್ರಿಯಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾದ ಪನಾಮಾ ಜೋಡಿ - ಗಂಗೋತ್ರಿ ಧಾಮದಲ್ಲಿ ಹಿಂದೂ ಧಾರ್ಮಿಕ ವಿಧಿವಿಧಾನಗಳ ಮೂಲಕ ವಿದೇಶಿ ಜೋಡಿ ಸಪ್ತ ಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ
ಉತ್ತರ ಕಾಶಿಯ ಗಂಗೋತ್ರಿ ಧಾಮದಲ್ಲಿ ಪನಾಮ ನಿವಾಸಿಗಳು ಹಿಂದೂ ಸಂಪ್ರದಾಯದಂತೆ ವಿವಾಹವಾದರು. ಭಗೀರಥ ಬಂಡೆಯ ಮೇಲೆ ಪುರೋಹಿತರು ವಿಧಿವತ್ತಾಗಿ ವಿವಾಹ ಕಾರ್ಯ ನೆರವೇರಿಸಿದರು.
![ಗಂಗೋತ್ರಿಯಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾದ ಪನಾಮಾ ಜೋಡಿ Foreign couple married with Hindu customs in Gangotri Dham](https://etvbharatimages.akamaized.net/etvbharat/prod-images/768-512-15315513-thumbnail-3x2-bng.jpg)
ಗಂಗೋತ್ರಿಯಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾದ ಪನಾಮಾ ಜೋಡಿ
'ಬಾಲ್ಯದಿಂದಲೂ ಭಾರತೀಯ ಸಂಸ್ಕೃತಿ ನನ್ನನ್ನು ಆಕರ್ಷಿಸಿತ್ತು. ದೇವಭೂಮಿಯ ಪವಿತ್ರ ಧಾಮದಲ್ಲಿ ಸಪ್ತ ಪದಿ ತುಳಿದಿರುವುದು ಸಂತಸ ತಂದಿದೆ. ಗಂಗೋತ್ರಿಯಲ್ಲಿ ಹಿಂದೂ ಪದ್ಧತಿಯಂತೆ ವಿವಾಹವಾಗುವುದು ನನ್ನ ಕನಸಾಗಿತ್ತು' ಎಂದು ವಧು ಫಿಲಿಸಬೆತ್ ಹೇಳಿದರು.
ಇದನ್ನೂ ಓದಿ:89ನೇ ವಸಂತಕ್ಕೆ ಕಾಲಿಟ್ಟ ದೇವೇಗೌಡರು; ಜನ್ಮದಿನಕ್ಕೆ ಶುಭಕೋರಿದ ಪ್ರಧಾನಿ ಮೋದಿ