ಕರ್ನಾಟಕ

karnataka

ETV Bharat / bharat

ಇಂಡೋ-ಪಾಕ್​ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ಡ್ರೋನ್​ ಹಾರಾಟ.. ಹಿಮ್ಮೆಟ್ಟಿಸಿದ ವೀರ ಯೋಧರು - ಸುಂದರ್​ಗಢ್​​ನಲ್ಲಿರುವ ಗಡಿ ಪ್ರದೇಶ

ಭಾರತ-ಪಾಕ್​​​ ಗಡಿಯಲ್ಲಿ ಮತ್ತೆ ಡ್ರೋನ್ ಹಾರಾಟ ನಡೆಸಿದ್ದು, ಅದನ್ನು ಭಾರತೀಯ ಯೋಧರು ಹಿಮ್ಮೆಟ್ಟಿಸಿದ್ದಾರೆ.

paksitani-drone-spotted-along-indo-pak-border-in-punjab-again
ಇಂಡೋ-ಪಾಕ್​ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ಡ್ರೋನ್​

By

Published : Dec 6, 2021, 4:06 PM IST

ಅಮೃತ್​​ಸರ್ (ಪಂಜಾಬ್): ಇಲ್ಲಿನ ಭಾರತ-ಪಾಕ್ ಗಡಿಯಲ್ಲಿ ಭಾನುವಾರ ತಡರಾತ್ರಿ ಡ್ರೋನ್ ಹಾರಾಟ ಕಂಡುಬಂದಿದ್ದು, 183ನೇ ಬೆಟಾಲಿಯನ್ ಯೋಧರು ಗುಂಡುಹಾರಿಸಿದ ಪರಿಣಾಮ ಅದು ವಾಪಸ್ ತೆರಳಿದೆ ಎಂದು ತಿಳಿದುಬಂದಿದೆ.

ಹಳೆ ಸುಂದರ್​ಗಢ್​​ನಲ್ಲಿರುವ ಗಡಿ ಪ್ರದೇಶದ ಬಳಿ ಡ್ರೋನ್ ಹಾರಾಟ ಕಂಡುಬಂದಿತ್ತು. ತಕ್ಷಣ ಸೈನಿಕರು ದಾಳಿ ನಡೆಸಿದ್ದು, ಡ್ರೋನ್ ವಾಪಸ್ ಪಾಕಿಸ್ತಾನದತ್ತ ತೆರಳಿದೆ ಎಂದು ತಿಳಿದುಬಂದಿದೆ.

ಈ ವಾರದಲ್ಲಿ ಕಂಡು ಬಂದ ಎರಡನೇ ಡ್ರೋನ್ ಆಗಿದ್ದು, ಯೋಧರು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದಾರೆ. ಈ ಘಟನೆ ಬಳಿಕ ಸ್ಥಳದಲ್ಲಿ ಹೆಚ್ಚಿನ ಶೋಧ ನಡೆಸಲಾಗಿದೆ. ಬಿಎಸ್​ಎಫ್ ಸಿಬ್ಬಂದಿ, ಹಿರಿಯ ಅಧಿಕಾರಿಗಳು ಮತ್ತು ಭದ್ರತಾ ಪಡೆ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಇದೇ ರೀತಿ ನ.30ರಂದು ಸಹ ಡ್ರೋನ್ ಹಾರಾಟ ಕಂಡುಬಂದಾಗ ಶೋಧ ನಡೆಸಿದ್ದ ಭದ್ರತಾ ಪಡೆಗೆ ಸ್ಥಳದಲ್ಲಿ ನಾಲ್ಕು ಹೆರಾಯಿನ್ ಪ್ಯಾಕೆಟ್​ಗಳು ಪತ್ತೆಯಾಗಿದ್ದವು.

ಇದನ್ನೂ ಓದಿ:ಜಮ್ಮು-ಕಾಶ್ಮೀರದ ಶೋಪಿಯಾನ್​ನಲ್ಲಿ ಇಬ್ಬರು ಎಲ್​ಇಟಿ ಉಗ್ರರ ಬಂಧನ.. ಶಸ್ತ್ರಾಸ್ತ್ರ, ಮದ್ದುಗುಂಡು ಜಪ್ತಿ

ABOUT THE AUTHOR

...view details