ನವದೆಹಲಿ :ಜನವರಿ 9ರಂದು ಟಾಮ್ಪ್ರೊದಲ್ಲಿ 16ನೇ ಪ್ರವಾಸಿ ಭಾರತೀಯ ದಿವಸ್ನ ಸಮಾವೇಶ ಆಯೋಜಿಸಲಾಗುವುದು ಅಂತಾ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀ ವಾಸ್ತವ ತಿಳಿಸಿದ್ದಾರೆ. ವರ್ಚುವಲ್ನಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪ್ರೆಸ್ ಆಫ್ ಸುರಿನಾಮ್ ಆಗಮಿಸಲಿದ್ದು, ಪ್ರಧಾನಿ ಮೋದಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದರು.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಂದೇ ಭಾರತ್ ಮಿಷನ್‌ನ 9ನೇ ಹಂತದಲ್ಲಿ 24 ದೇಶಗಳಿಂದ 1,495 ಅಂತಾರಾಷ್ಟ್ರೀಯ ವಿಮಾನಗಳು ಸಂಚರಿಸಲಿವೆ. ಈ ಮೂಲಕ 2.8 ಲಕ್ಷ ಜನರು ಭಾರತಕ್ಕೆ ಹಿಂದಿರುಗಲಿದ್ದು, ಈಗಾಗಲೇ 49,000 ಮಂದಿ ಮರಳಿದ್ದಾರೆ. ಮೇ 2020ರಿಂದ ಈವರೆಗೆ 44.7 ಲಕ್ಷಕ್ಕೂ ಹೆಚ್ಚು ಜನರನ್ನು ವಿದೇಶಗಳಿಂದ ಮರಳಿ ಕರೆ ತರಲಾಗಿದೆ ಎಂದರು.