ಕರ್ನಾಟಕ

karnataka

ETV Bharat / bharat

ಎಲ್​ಒಸಿ ಬಳಿ ಗಡಿ ದಾಟಿ ಬಂದ ಪಾಕ್ ಮಹಿಳೆ ಬಂಧಿಸಿದ ಭದ್ರತಾಪಡೆ - ಗಡಿ ನಿಯಂತ್ರಣ ರೇಖೆ

ಈಕೆ ಪಾಕಿಸ್ತಾನದ ಇಸ್ಲಾಮಾಬಾದ್‌ನ ಫಿರೋಜ್‌ಬಂಡಾ ಪ್ರದೇಶದ ನಿವಾಸಿ. ಪೂಂಛ್​ ನ ಚಕ್ರ ದಾ ಬಾಗ್‌ನಲ್ಲಿ ನಿಯಂತ್ರಣ ರೇಖೆಯನ್ನು ದಾಟಿ ಬಂದಾಗ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Pakistani woman arrested for crossing LoC in Poonch
Pakistani woman arrested for crossing LoC in Poonch

By

Published : Jul 16, 2022, 1:59 PM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ಭಾರತದೊಳಗೆ ಪ್ರವೇಶಿಸಿದ ಪಾಕಿಸ್ತಾನಿ ಮಹಿಳೆ ರೋಜಿನಾ ಎಂಬಾಕೆಯನ್ನು ಭಾರತೀಯ ಸೇನೆ ಬಂಧಿಸಿದೆ. 49 ವರ್ಷದ ಈ ಮಹಿಳೆಯನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಕೆ ಪಾಕಿಸ್ತಾನದ ಇಸ್ಲಾಮಾಬಾದ್‌ನ ಫಿರೋಜ್‌ಬಂಡಾ ಪ್ರದೇಶದ ನಿವಾಸಿ. ಪೂಂಛ್​ ನ ಚಕ್ರ ದಾ ಬಾಗ್‌ನಲ್ಲಿ ನಿಯಂತ್ರಣ ರೇಖೆಯನ್ನು ದಾಟಿ ಬಂದಾಗ ಈಕೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಮಹಿಳೆ ಗಡಿ ದಾಟಿ ಬಂದಿರುವ ಉದ್ದೇಶವೇನು ಎಂಬ ಬಗ್ಗೆ ಈಗ ಭದ್ರತಾ ಪಡೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಇದನ್ನು ಓದಿ:ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸದಸ್ಯತ್ವ ಪಡೆಯುವ ಭಾರತದ ಯತ್ನಕ್ಕೆ ಪಾಕಿಸ್ತಾನ ಮತ್ತೆ ಅಡ್ಡಿ

ABOUT THE AUTHOR

...view details