ಶ್ರೀನಗರ(ಜಮ್ಮು-ಕಾಶ್ಮೀರ) :ತಮ್ಮ ದೇಶಕ್ಕೆ ತೆರಳಲು ಅನುಮತಿ ನೀಡಬೇಕೆಂದು ಜಮ್ಮು-ಕಾಶ್ಮೀರದಲ್ಲಿನ ಮಾಜಿ ಭಯೋತ್ಪಾದಕರ ಪತ್ನಿಯರು ಪ್ರತಿಭಟನೆ ನಡೆಸಿದ್ದಾರೆ.
ಶ್ರೀನಗರದ ಪ್ರೆಸ್ ಎನ್ಕ್ಲೇವ್ನಿಂದ ಘಂಟಾಘರ್ ಕಡೆಗೆ ಮೆರವಣಿಗೆ ನಡೆಸಿದ ಮಹಿಳೆಯರು, ತಾವು ಪಾಕಿಸ್ತಾನಕ್ಕೆ ಪ್ರಯಾಣಿಸಲು ದಾಖಲಾತಿಗಳನ್ನು ನೀಡಬೇಕೆಂದು ಆಗ್ರಹಿಸಿದರು.
ಪಾಕ್ ಯುವತಿಯರನ್ನು ವಿವಾಹವಾಗಿ ಇಲ್ಲಿಗೆ ಕರೆತಂದಿದ್ದ ಉಗ್ರರು, ಕೆಲವು ಸರ್ಕಾರಿ ಯೋಜನೆಗಳಿಂದಾಗಿ ಭಯೋತ್ಪಾದಕರು ತಮ್ಮ ಸಂಘಟನೆಗಳಿಂದ ದೂರ ಉಳಿದಿದ್ದರು.