ಕರ್ನಾಟಕ

karnataka

ETV Bharat / bharat

ಪೂಂಚ್, ಕಥುವಾ ಜಿಲ್ಲೆಗಳಲ್ಲಿ  ಪಾಕ್‌ನಿಂದ ಅಪ್ರಚೋದಿತ ದಾಳಿ : ಭಾರತೀಯ ಸೇನೆಯಿಂದ ದಿಟ್ಟ ಉತ್ತರ - ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಕದನ ವಿರಾಮ ಉಲ್ಲಂಘನೆ

ಮುಂಜಾನೆ 4ರ ಸುಮಾರಿಗೆ ಎರಡೂ ಕಡೆಯಿಂದಲೂ ಗುಂಡಿನ ಮತ್ತು ಶೆಲ್ ದಾಳಿ ನಿಂತು ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನದ ಈ ಅಪ್ರಚೋದಿತ ದಾಳಿಗೆ ಭಾರತೀಯ ಸೇನೆ ಕೂಡ ತಕ್ಕ ಪ್ರತ್ಯುತ್ತರ ನೀಡಿದೆ..

ಪೂಂಚ್ ಮತ್ತು ಕಥುವಾ ಜಿಲ್ಲೆಗಳಲ್ಲಿ ಅಪ್ರಚೋದಿತ ದಾಳಿ ನಡೆಸಿದ ಪಾಕ್
ಪೂಂಚ್ ಮತ್ತು ಕಥುವಾ ಜಿಲ್ಲೆಗಳಲ್ಲಿ ಅಪ್ರಚೋದಿತ ದಾಳಿ ನಡೆಸಿದ ಪಾಕ್

By

Published : Nov 7, 2020, 11:51 AM IST

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ಕಥುವಾ ಜಿಲ್ಲೆಗಳಲ್ಲಿನ ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಅಂತಾರಾಷ್ಟ್ರೀಯ ಗಡಿ (ಐಬಿ) ಯ ಉದ್ದಕ್ಕೂ ಫಾರ್ವರ್ಡ್ ಪೋಸ್ಟ್‌ಗಳು ಮತ್ತು ಹಳ್ಳಿಗಳ ಮೇಲೆ ಪಾಕಿಸ್ತಾನ ಪಡೆಗಳು ಅಪ್ರಚೋದಿತ ಗುಂಡಿನ ಮತ್ತು ಶೆಲ್ ದಾಳಿ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾತ್ರಿ 2.30ರ ಸುಮಾರಿಗೆ ಪೂಂಚ್‌ನ ನಿಯಂತ್ರಣ ರೇಖೆಯ ಉದ್ದಕ್ಕೂ ಮಂಕೋಟೆ ಸೆಕ್ಟರ್‌ನಲ್ಲಿ ಮಾರ್ಟರ್ ಶೆಲ್ ದಾಳಿ ಪ್ರಾರಂಭವಾಯಿತು. ಹಿರಾನಗರ್ ಸೆಕ್ಟರ್‌ನಲ್ಲಿ ಐಬಿ ಉದ್ದಕ್ಕೂ ಗುಂಡಿನ ದಾಳಿ ಮುಂದುವರೆಯಿತು.

ಮುಂಜಾನೆ 4ರ ಸುಮಾರಿಗೆ ಎರಡೂ ಕಡೆಯಿಂದಲೂ ಗುಂಡಿನ ಮತ್ತು ಶೆಲ್ ದಾಳಿ ನಿಂತು ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನದ ಈ ಅಪ್ರಚೋದಿತ ದಾಳಿಗೆ ಭಾರತೀಯ ಸೇನೆ ಕೂಡ ತಕ್ಕ ಪ್ರತ್ಯುತ್ತರ ನೀಡಿದೆ. ದಾಳಿಯಲ್ಲಿ ಭಾರತೀಯ ಸೈನಿಕರಿಗೆ ಯಾವುದೇ ಹಾನಿಯಾಗಿಲ್ಲ.

For All Latest Updates

ABOUT THE AUTHOR

...view details