ಶ್ರೀನಗರ, ಜಮ್ಮು ಮತ್ತು ಕಾಶ್ಮೀರ: ಭಾರತ ಪಾಕ್ ಅಂತಾರಾಷ್ಟ್ರೀಯ ಗಡಿ ಅರ್ನಿಯಾ ಸೆಕ್ಟರ್ ಸಮೀಪದ ಟೋಫ್ ಗ್ರಾಮದಲ್ಲಿ ಬುಧವಾರ ನಡೆದ ಶಸ್ತ್ರಾಸ್ತ್ರ ಮರು ಪಡೆಯುವಿಕೆ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಯ ಭಯೋತ್ಪಾದಕನೊಬ್ಬನನ್ನು ಕೊಲ್ಲಲಾಗಿದ್ದು, ಪೊಲೀಸ್ ಕಾನ್ಸ್ಟೇಬಲ್ ಗಾಯಗೊಂಡಿದ್ದಾರೆ.
ಜಮ್ಮು ಜಿಲ್ಲೆಯ ಅರ್ನಿಯಾ ಸೆಕ್ಟರ್‌ನಲ್ಲಿ ಗುಪ್ತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವಾಗ ಪಾಕಿಸ್ತಾನದ ಎಲ್‌ಇಟಿ ಕಮಾಂಡರ್ವೊಬ್ಬ ಮಾಜಿ ಸೈನಿಕನಿಂದ ರೈಫಲ್ ಕಸಿದುಕೊಂಡು ಪೊಲೀಸ್ ಪಾರ್ಟಿಯ ಮೇಲೆ ಗುಂಡು ಹಾರಿಸಿದಾಗ ಕಾನ್ಸ್ಟೇಬಲ್ ಒಬ್ಬರು ಗಾಯಗೊಂಡಿದ್ದಾರೆ. ಈ ವೇಳೆ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.