ಜಮ್ಮು:ಅಕ್ರಮವಾಗಿ ನುಸುಳಿ ಭಾರತದ ಜೈಲಿನಲ್ಲಿ ಶಿಕ್ಷೆಗೆ ಒಳಪಟ್ಟ ಪಾಕಿಸ್ತಾನದ ಭಯೋತ್ಪಾದಕ ಪೊಲೀಸ್ ತುಪಾಕಿಯನ್ನು ಕಸಿದು ನಡೆಸಿದ ದಾಳಿಯಲ್ಲಿ ಇಬ್ಬರು ಕಾನ್ಸ್ಟೇಬಲ್ ಗಾಯಗೊಂಡಿದ್ದಾನೆ. ಈ ವೇಳೆ, ನಡೆದ ಫೈರಿಂಗ್ನಲ್ಲಿ ಪಾಕಿಸ್ತಾನ ಕೈದಿ ಹತನಾಗಿದ್ದಾನೆ. ಜಮ್ಮುವಿನಲ್ಲಿ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ.
ಮಹಮದ್ ಅಲಿ ಹುಸೈನ್ ಮೃತ ಉಗ್ರ. ಈತ ಪಾಕ್ ಮತ್ತು ಭಾರತ ಗಡಿ ಬಳಿಕ ಅರ್ನಿಯಾ ಸೆಕ್ಟರ್ನಲ್ಲಿ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ಇಳಿಸುವ ಎಲ್ಇಟಿಯ ಕಮಾಂಡರ್ ಆಗಿದ್ದ. ಈತನನ್ನು ಹಿಡಿದು ಆ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಬಳಿಕ ಈತನ ಎಲ್ಲ ತಂತ್ರಗಳನ್ನು ತಲೆಕೆಳಗೆ ಮಾಡಿ, ಜೈಲಿಗಟ್ಟಲಾಗಿತ್ತು.