ಜಮ್ಮು ಮತ್ತು ಕಾಶ್ಮೀರ:ಇಂದು ಮುಂಜಾನೆ ಜಮ್ಮು ಅಂತಾರಾಷ್ಟ್ರೀಯ ಗಡಿ ಬಳಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನಿ ಒಳನುಸುಳುಕೋರನೊಬ್ಬನನ್ನು ಭದ್ರತಾ ಪಡೆ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಯಾಲ್‌ಕೋಟ್‌ನ ನಿವಾಸಿ ಮೊಹಮ್ಮದ್ ಶಬಾದ್ (45) ಗಡಿಯಾಚೆಯಿಂದ ಅರ್ನಿಯಾ ಸೆಕ್ಟರ್‌ಗೆ ನುಸುಳಲು ಪ್ರಯತ್ನಿಸುತ್ತಿದ್ದಾಗ ಬಿಎಸ್‌ಎಫ್ ಸಿಬ್ಬಂದಿ ಆತನ ಚಲನವಲನಗಳನ್ನ ಗಮನಿಸಿ ಬಂಧಿಸಿದ್ದು, ವಿಚಾರಣೆ ಮುಂದುವರೆದಿದೆ. ಜೊತೆಗೆ ಅವನ ಬಳಿ ಯಾವುದೇ ದೋಷಾರೋಪಣೆಯ ವಸ್ತುಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.