ಅಮೃತಸರ(ಪಂಜಾಬ್): ಭಾರತದ ಗಡಿ ನಿಯಂತ್ರಣ ರೇಖೆ ಬಳಿ ಬಂದಿದ್ದ ಪಾಕಿಸ್ತಾನಕ್ಕೆ ಸೇರಿದ ಡ್ರೋನ್ ಅನ್ನು ಗುಂಡಿನ ದಾಳಿ ಮೂಲಕ ಭದ್ರತಾ ಪಡೆಗಳು ಹಿಮ್ಮೆಟ್ಟಿಸಿರುವ ಘಟನೆ ಪಂಜಾಬ್‌ನ ಅಮೃತಸರ ಜಿಲ್ಲೆಯಲ್ಲಿ ನಡೆದಿದೆ.
ಭಾರತ - ಪಾಕ್ ಗಡಿಯ ಬಿಒಪಿ ಟವರ್ ಬಳಿ ಡ್ರೋನ್ ಕಾಣಿಸಿಕೊಳ್ಳುತ್ತಿದ್ದಂತೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಆಗ ಪಾಕಿಸ್ತಾನದತ್ತ ಡ್ರೋನ್ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೃತಸರ ಜಿಲ್ಲೆಯ ಬಿಂದಿ ಸೈದನ್ ಗ್ರಾಮದಲ್ಲಿ ಭದ್ರತಾ ಸಿಬ್ಬಂದಿ ಈ ಡ್ರೋನ್ ಅನ್ನು ಗುರುತಿಸಿದ್ದಾರೆ.