ಅಮೃತ್ಸರ್, ಪಂಜಾಬ್: ಬುಧವಾರ ರಾತ್ರಿ ಅಮೃತ್ಸರ್ನ ರಾಮದಾಸ್ ನಜ್ದಿರ್ ಗಡಿ ಪೋಸ್ಟ್ನ ದರಿಯಾ ಮಂದಸೌರ್ ಪ್ರದೇಶದಲ್ಲಿ ಪಾಕಿಸ್ತಾನದ ಡ್ರೋನ್ವೊಂದು ಕಾಣಿಸಿಕೊಂಡಿರುವ ಘಟನೆ ನಡೆದಿದೆ.
ಕಳೆದ ರಾತ್ರಿ 11.30ರ ಸುಮಾರಿಗೆ ಪಾಕಿಸ್ತಾನ ಕಡೆಯಿಂದ ಬಂದ ಡ್ರೋನ್ವೊಂದು ಅಮೃತ್ಸರದ ಗಡಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಗಡಿ ಭದ್ರತಾ ಪಡೆಗಳು ಡ್ರೋನ್ ಮೇಲೆ 10 ಸುತ್ತಿನ ಗುಂಡಿನ ದಾಳಿ ನಡೆಸಿವೆ. ಬಳಿಕ ಡ್ರೋನ್ ಪಾಕಿಸ್ತಾನಕ್ಕೆ ಹಿಂತಿರುಗಿದೆ. ಡ್ರೋನ್ ಕಾಣಿಸಿಕೊಂಡಿರುವ ಪ್ರದೇಶದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ.