ಉಧಾಂಪುರ, ಜಮ್ಮು-ಕಾಶ್ಮೀರ :ಭಯೋತ್ಪಾದಕ ಚಟುವಟಿಕೆಗಳ ತಾಣವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕದಡಲು ಪಾಕಿಸ್ತಾನ ಹಲವು ರೀತಿಯ ತಂತ್ರಗಳನ್ನು ಹೂಡುತ್ತಿದೆ ಎಂದು ಗುರುವಾರ ಜಮ್ಮು-ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದು, ಡ್ರೋನ್ ಮೂಲಕ ಕುಕೃತ್ಯಗಳನ್ನು ಜರುಗಿಸುತ್ತಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಪಾಕಿಸ್ತಾನದ ಡ್ರೋನ್ ಬುಧವಾರ ಜಮ್ಮು ಕಾಶ್ಮೀರದಲ್ಲಿ ಪ್ರದೇಶದಲ್ಲಿ ಗ್ರೆನೇಡ್‌ಗಳು, ಐಇಡಿ, ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ಎಸೆದಿದೆ. ಅಷ್ಟೇ ಅಲ್ಲ, ಇದೇ ಮೊದಲ ಬಾರಿಗೆ ದ್ರವರೂಪದಲ್ಲಿ ರಾಸಾಯನಿಕವನ್ನು ಡ್ರೋನ್ ಮೂಲಕ ಭಾರತದ ಭೂಮಿಯೊಳಗೆ ಬೀಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್,ಪಾಕಿಸ್ತಾನದ ಡ್ರೋನ್ ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೆನೇಡ್, ಐಇಡಿ, ಪಿಸ್ತೂಲ್, ಮದ್ದುಗುಂಡುಗಳನ್ನು ಬೀಳಿಸಿದೆ. ದ್ರವರೂಪದ ರಾಸಾಯನಿಕ ಕೂಡ ಕಂಡು ಬಂದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.