ಪೋರಬಂದರ್(ಗುಜರಾತ್): ಕೆಲ ದಿನಗಳಿಂದ ತನ್ನ ಸಮುದ್ರ ಗಡಿಗೆ ಬರುವ ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಬಂಧಿಸುತ್ತಿದೆ. ಇದರ ಬೆನ್ನಲ್ಲೆ ನೆರೆಯ ಪಾಕಿಸ್ತಾನದ ಜೈಲು ಅಧಿಕಾರಿಗಳು ಕನಿಷ್ಠ 20 ಮೀನುಗಾರರನ್ನು ಬಿಡುಗಡೆ ಮಾಡಿದ್ದಾರೆ. ಇನ್ನೆರಡು-ಮೂರು ದಿನಗಳಲ್ಲಿ ವೆರಾವಲ್ ಬಂದರಿಗೆ ಆಗಮಿಸಿ ಕುಟುಂಬಸ್ಥರನ್ನು ಭೇಟಿ ಮಾಡಲಿದ್ದಾರೆ.
ಪಾಕಿಸ್ತಾನದ ಜೈಲಿನಿಂದ ಬಿಡುಗಡೆಯಾಗಿರುವ ಮೀನುಗಾರರು ಕೆಲವೇ ದಿನಗಳಲ್ಲಿ ತಾಯ್ನಾಡಿಗೆ ಮರಳಲಿದ್ದಾರೆ. ಇವರೆಲ್ಲರನ್ನೂ ಪಂಜಾಬ್, ಭಾರತ ಮತ್ತು ಪಾಕಿಸ್ತಾನದ ವಾಘಾ-ಅಟ್ಟಾರಿ ಗಡಿಯಿಂದ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು. ಅಲ್ಲಿಂದ ಅವರು ತಾಯ್ನಾಡಿಗೆ ಹೊರಡುತ್ತಾರೆ.