ಕರ್ನಾಟಕ

karnataka

ETV Bharat / bharat

ಭಾರತದ ವಿದೇಶಾಂಗ ನೀತಿಯನ್ನು ಹಾಡಿ ಹೊಗಳಿದ ಪಾಕ್​ ಪ್ರಧಾನಿ ಇಮ್ರಾನ್​ ಖಾನ್!​

Imran Khan lauds India for its foreign policy.. ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ಸರ್ಕಾರ ಡೋಲಾಯಮಾನ ಸ್ಥಿತಿಗೆ ತಲುಪಿದೆ. ಈ ನಡುವೆ ಭಾರತ ವಿದೇಶಾಂಗ ನೀತಿಯ ಬಗ್ಗೆ ಮಾತನಾಡಿರುವ ಇಮ್ರಾನ್​ಖಾನ್,​ ಸ್ವತಂತ್ರ ಮತ್ತು ಜನರ ಒಳಿತು ಬಯಸುವ ನೀತಿ ಇದಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

imran-khan
ಇಮ್ರಾನ್​ ಖಾನ್​

By

Published : Mar 20, 2022, 9:42 PM IST

ಇಸ್ಲಾಮಾಬಾದ್(ಪಾಕಿಸ್ತಾನ):ಭಾರತದ ವಿದೇಶಾಂಗ ನೀತಿ ಸ್ವತಂತ್ರ ಮತ್ತು ಜನರ ಒಳಿತನ್ನೇ ಬಯಸುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ರಷ್ಯಾದ ಜೊತೆಗೆ ತೈಲ ಒಪ್ಪಂದ ಮಾಡಿಕೊಂಡ ವಿಷಯದ ಬಗ್ಗೆ ಮಾತನಾಡಿರುವ ಇಮ್ರಾನ್​ಖಾನ್​, ರಷ್ಯಾದ ತೈಲದ ಮೇಲೆ ಅಮೆರಿಕದ ನಿರ್ಬಂಧಗಳ ಹೊರತಾಗಿಯೂ ಆ ದೇಶದಿಂದ ಭಾರತ ತೈಲ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿರುವುದಲ್ಲದೇ, ಅಮೆರಿಕದ ಜೊತೆ ಉತ್ತಮ ಸಂಬಂಧ ಕಾಪಾಡಿಕೊಂಡಿರುವುದು ಶ್ಲಾಘನೀಯ. ಇದು ಆ ಭಾರತದ ಪ್ರಜೆಗಳ ಒಳಿತಿಗೆ ಪೂರಕವಾಗಿದೆ ಎಂದು ಹೇಳಿದ್ದಾರೆ.

ನೆರೆಯ ದೇಶ ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿದ್ದಕ್ಕಾಗಿ ನಾನು ಪ್ರಶಂಸಿಸುತ್ತೇನೆ. ಭಾರತ ಅಮೆರಿಕದ ಮೈತ್ರಿ ದೇಶವಾಗಿದೆ. ಅಲ್ಲದೇ, ಕ್ವಾಡ್​ನ ಭಾಗವಾಗಿದೆ. ಉಕ್ರೇನ್​- ರಷ್ಯಾ ಯುದ್ಧದಲ್ಲಿ ತಟಸ್ಥ ಧೋರಣೆ ಅನುಸರಿಸಿದೆ. ಅಲ್ಲದೇ, ಈ ವೇಳೆಯೇ ರಷ್ಯಾದಿಂದ ತೈಲ ಆಮದಿಗೆ ಮುಂದಾಗಿದೆ ಎಂದಿದ್ದಾರೆ.

ಅವಿಶ್ವಾಸ ಮಂಡನೆಗೆ ಗುರಿಯಾಗಿರುವ ಇಮ್ರಾನ್​ ಖಾನ್​ ಇದೇ ವೇಳೆ ತಮ್ಮ ಸರ್ಕಾರದ ಬಗ್ಗೆಯೂ ಮಾತನಾಡಿದ್ದು, ನಾನು ಯಾರ ಮುಂದೆಯೂ ತಲೆಬಾಗಲ್ಲ. ನನ್ನ ರಾಷ್ಟ್ರವೂ ಕೂಡ ಯಾರ ಮುಂದೆ ಮಂಡಿಯೂರಲು ಬಿಡಲ್ಲ ಎಂದಿದ್ದಾರೆ.

ಓದಿ:ಮತ್ತೊಮ್ಮೆ ಮಣಿಪುರ ಸಿಎಂ ಆಗಿ ಬಿರೇನ್​ ಸಿಂಗ್ ಅವಿರೋಧ ಆಯ್ಕೆ

ABOUT THE AUTHOR

...view details