ಇಸ್ಲಾಮಾಬಾದ್, ಪಾಕಿಸ್ತಾನ:ಆಫ್ಘಾನಿಸ್ತಾನ ವಿಚಾರವಾಗಿ ಭಾರತ ಆಹ್ವಾನಿಸಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಾಕಿಸ್ತಾನದ ಭದ್ರತಾ ಸಲಹೆಗಾರ ಡಾ. ಮೊಯಿದ್ ಯುಸೂಫ್ ಮಾಹಿತಿ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಉಜ್ಬೇಕಿಸ್ತಾನದೊಂದಿಗೆ ರಕ್ಷಣಾ ಸಂಬಂಧಿ ಒಪ್ಪಂದ ಪತ್ರವೊಂದಕ್ಕೆ ಸಹಿ ಹಾಕುವ ವೇಳೆಯಲ್ಲಿ ಈ ರೀತಿಯ ಸ್ಪಷ್ಟನೆ ನೀಡಿದ್ದಾರೆ ಎಂದು ಪಾಕಿಸ್ತಾನದ ಹಣಕಾಸು ವಿಚಾರಗಳ ಸಂಬಂಧಿ ಪತ್ರಿಕೆ ಬ್ಯುಸಿನೆಸ್ ರೆಕಾರ್ಡರ್ ವರದಿ ಮಾಡಿದೆ.
ಆಫ್ಘಾನಿಸ್ತಾನದ ಕುರಿತು ಭಾರತ ಸಭೆಗೆ ಆಹ್ವಾನಿಸಿದ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೊಯೀದ್ ಯುಸೂಫ್ 'ನಾನು ಹೋಗುವುದಿಲ್ಲ' ಎಂದಿದ್ದಾರೆ.