ಕರ್ನಾಟಕ

karnataka

ETV Bharat / bharat

ಭಾರತದ 60 ಮೀನುಗಾರರ ಅಪಹರಿಸಿ,10 ಬೋಟ್‌ ಜಪ್ತಿ ಮಾಡಿಕೊಂಡ ಪಾಕಿಸ್ತಾನ - ಪಾಕಿಸ್ತಾನ ಕಡಲ ಭದ್ರತಾ ಸಂಸ್ಥೆ

ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಭಾರತೀಯ ಮೀನುಗಾರರು ಮತ್ತು ಅವರ ಬೋಟ್​ಗಳನ್ನು ಪಾಕಿಸ್ತಾನ ಕಡಲ ಭದ್ರತಾ ಸಂಸ್ಥೆ ಅಪಹರಿಸಿದೆ.

Pakistan has hijacked 60 fishermen along with 10 boats from the Porbandar Sea
ಪಾಕಿಸ್ತಾನದಿಂದಬ್ಬಿ ಸಮುದ್ರ 60 ಮೀನುಗಾರರ ಅಪಹರಣ.. 10 ಬೋಟ್ ಜಪ್ತಿ

By

Published : Feb 9, 2022, 6:59 AM IST

ಪೋರಬಂದರ್​(ಗುಜರಾತ್)​:ಮೀನುಗಾರಿಕೆಗಾಗಿ ಅರಬ್ಬಿ ಸಮುದ್ರಕ್ಕೆ ಇಳಿದಿದ್ದ ಸುಮಾರು 60 ಮೀನುಗಾರರನ್ನು ಅಪಹರಿಸಿರುವ ಪಾಕಿಸ್ತಾನ ಕಡಲ ಭದ್ರತಾ ಸಂಸ್ಥೆ (Pakistan Maritime Security Agency) 10 ದೋಣಿಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.

ಕಳೆದ 24 ಗಂಟೆಗಳಲ್ಲಿ 13 ಬೋಟ್​ಗಳನ್ನು ಪಾಕಿಸ್ತಾನ ವಶಕ್ಕೆ ಪಡೆದಿದೆ. ಮಂಗಳವಾರವಷ್ಟೇ 3 ಬೋಟ್​ಗಳು ಮತ್ತು 18 ಮೀನುಗಾರರನ್ನು ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗಲಾಗಿದೆ. ಸದ್ಯಕ್ಕೆ 60 ಮೀನುಗಾರರು ಮತ್ತು 10 ಬೋಟ್​ಗಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದೆ.

ಈ ಮೀನುಗಾರರ ಪೈಕಿ ಬಹುತೇಕರು ಗುಜರಾತ್‌ನ ಓಖಾ ಮತ್ತು ಪೋರಬಂದರ್​ಗೆ ಸೇರಿದವರು ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ:ಚಿನಾರ್​ ಕಾರ್ಪ್ಸ್​ನ ಫೇಸ್​ಬುಕ್​, ಇನ್​​ಸ್ಟಾಗ್ರಾಂ​ ಮೇಲೆ ನಿರ್ಬಂಧ

ABOUT THE AUTHOR

...view details