ಇಸ್ಲಾಮಾಬಾದ್ (ಪಾಕಿಸ್ತಾನ):ಭಾರತದ ಕ್ಷಿಪಣಿಯೊಂದು ಪಾಕಿಸ್ತಾನಕ್ಕೆ ಸೇರಿದ ಪ್ರದೇಶವೊಂದರಲ್ಲಿ ಬಿದ್ದಿದೆ ಎಂದು ಪಾಕಿಸ್ತಾನಿ ಸಶಸ್ತ್ರ ಪಡೆಗಳು ಹೇಳಿಕೊಂಡಿವೆ. ಹರಿಯಾಣ ರಾಜ್ಯದ ಸಿರ್ಸಾ ನಗರಕ್ಕೆ ಸಮೀಪವಿರುವ ಪ್ರದೇಶದಿಂದ ಉಡಾಯಿಸಲಾದ ಕ್ಷಿಪಣಿಯನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಿಯಾನ್ ಚನ್ನು ನಗರದ ಬಳಿ ಬಿದ್ದಿದೆ ಎನ್ನಲಾಗಿದೆ.
ಗುರವಾರ ಸಂಜೆ 6:43ಕ್ಕೆ ಪಾಕಿಸ್ತಾನದ ವಾಯುಪಡೆಯು ತನ್ನ ಭೂಪ್ರದೇಶದೊಳಗೆ ಬಿದ್ದಿದ್ದ ಕ್ಷಿಪಣಿಯೊಂದನ್ನು ಗುರುತಿಸಿದೆ. ಈ ಕ್ಷಿಪಣಿ ಇದ್ದಕ್ಕಿದ್ದಂತೆ ಪಾಕಿಸ್ತಾನದ ಪ್ರದೇಶದ ಕಡೆಗೆ ವೇಗವಾಗಿ ನುಗ್ಗಿದೆ ಎಂದು ಪಾಕಿಸ್ತಾನಿ ಸಶಸ್ತ್ರ ಪಡೆಗಳ ವಕ್ತಾರರನ್ನು ಉಲ್ಲೇಖಿಸಿ ರಷ್ಯಾದ ಸುದ್ದಿ ಸಂಸ್ಥೆ ವರದಿ ಮಾಡಿದೆ.