ಕರ್ನಾಟಕ

karnataka

By

Published : Jan 29, 2022, 2:47 PM IST

Updated : Jan 29, 2022, 3:08 PM IST

ETV Bharat / bharat

ಓಖಾ ಸಮುದ್ರದಿಂದ 7 ಮೀನುಗಾರರನ್ನು ಅಪಹರಿಸಿದ ಪಾಕ್​​

ಶುಕ್ರವಾರದಂದು ಪಾಕಿಸ್ತಾನಿ ಸಂಸ್ಥೆಯೊಂದು ಓಖಾ ಸಮುದ್ರದಿಂದ 7 ಮೀನುಗಾರರ ಜೊತೆ ದೋಣಿಯನ್ನೂ ಅಪಹರಿಸಿದೆ..

Pakistan abduct seven fishermen from Okha sea
ಓಖಾ ಸಮುದ್ರದಿಂದ 7 ಮೀನುಗಾರರನ್ನು ಅಪಹರಿಸಿದ ಪಾಕ್​​

ದೇವಭೂಮಿ ದ್ವಾರಕಾ (ಗುಜರಾತ್) :ದೇವಭೂಮಿ ದ್ವಾರಕಾ ಜಿಲ್ಲೆಯ ಓಖಾ ಬಂದರಿಗೆ ಗುಜರಾತ್​ನ ಹೆಚ್ಚಿನ ಸಂಖ್ಯೆ ಮೀನುಗಾರರು ಬರುತ್ತಾರೆ. ಶುಕ್ರವಾರದಂದು ಪಾಕಿಸ್ತಾನಿ ಸಂಸ್ಥೆಯೊಂದು 7 ಮೀನುಗಾರರ ಜೊತೆ ದೋಣಿಯನ್ನೂ ಅಪಹರಿಸಿದೆ.

ಮಾಹಿತಿ ಪ್ರಕಾರ, ಓಖಾ ಬಂದರಿನಿಂದ ತುಳಸಿ ಮೈಯಾ ಎಂಬ ಬೋಟ್ ಜ.18ರಂದು ಓಖಾ ಸಮುದ್ರಕ್ಕೆ ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿತ್ತು. ಇಂಜಿನ್ ವೈಫಲ್ಯದಿಂದ ಬೋಟ್ ಸಮುದ್ರದಲ್ಲಿ ಸಿಲುಕಿತ್ತು. ಏತನ್ಮಧ್ಯೆ, ಜನವರಿ 28ರಂದು 7 ಮಂದಿಯನ್ನು ಪಾಕಿಸ್ತಾನದ ಸಂಸ್ಥೆಯೊಂದು ಅಪಹರಿಸಿದೆ.

ಇದನ್ನೂ ಓದಿ:BIG SHOCK: 2017ರಲ್ಲಿ ಇಸ್ರೇಲ್‌ ಜತೆಗಿನ ಒಪ್ಪಂದದ ಭಾಗವಾಗಿ ಭಾರತ ಪೆಗಾಸಸ್ ಖರೀದಿಸಿತು : ನ್ಯೂಯಾರ್ಕ್ ಟೈಮ್ಸ್ ವರದಿ

ಒಂದು ಕಡೆ ಪಾಕಿಸ್ತಾನ ಸಹೋದರತ್ವದ ಬಗ್ಗೆ ಮಾತನಾಡುತ್ತಿದೆ. ಮತ್ತೊಂದೆಡೆ ಸಮುದ್ರದಲ್ಲಿ ಸಿಲುಕಿದ್ದ ಮೀನುಗಾರರನ್ನು ಕಿಡ್ನಾಪ್ ಮಾಡಿದೆ. ಈ ದೋಣಿ ಗಿರ್ ಸೋಮನಾಥ್ ಜಿಲ್ಲೆಯ ಮಂಗ್ರೋಲ್‌ನ ವತ್ಸಲ್ ಪ್ರೇಮ್‌ಜಿಭಾಯ್ ಥಾಪಾನಿಯಾ ಅವರಿಗೆ ಸೇರಿದ್ದಾಗಿದೆ.

ಮೀನುಗಾರಿಕೆಗಾಗಿ ಓಖಾಗೆ ಬಂದಿತ್ತು. ಶುಕ್ರವಾರ ಮಧ್ಯಾಹ್ನದಿಂದ ಮೀನುಗಾರರು ಸಂಪರ್ಕ ಕಳೆದುಕೊಂಡಿದ್ದರು. ಮಧ್ಯಾಹ್ನ ಕೊನೆಯದಾಗಿ ಮೀನುಗಾರರು, ದೋಣಿಯ ಮಾಲೀಕರೊಂದಿಗೆ ಮಾತುಕತೆ ನಡೆಸಿದ್ದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 29, 2022, 3:08 PM IST

ABOUT THE AUTHOR

...view details