ಕರ್ನಾಟಕ

karnataka

ETV Bharat / bharat

ಪಾಕ್​ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ.. ಭಾರತೀಯ ಸೇನೆಯಿಂದ ತಕ್ಕ ಪ್ರತ್ಯುತ್ತರ - ಕದನ ವಿರಾಮ ಉಲ್ಲಂಘನೆ

ಶುಕ್ರವಾರ ರಾತ್ರಿ 10:10ರ ಸುಮಾರಿಗೆ ಹಿರಾನಗರ ಸೆಕ್ಟರ್​​ನ ಬೊಬಿಯಾನ್​​ ಗಡಿಯಲ್ಲಿ ನಿರಂತರವಾಗಿ ಪಾಕ್ ಗುಂಡಿನ ದಾಳಿ ನಡೆಸಿದೆ. ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ನೀಡಿದೆ. ನಿನ್ನೆ ರಾತ್ರಿಯಿಂದ ಮುಂಜಾನೆ 3 ಗಂಟೆವರೆಗೆ ಇಂಡೋ-ಪಾಕ್ ಸೇನೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.

Kathua
ಪ್ರತ್ಯುತ್ತರ

By

Published : Jan 30, 2021, 4:31 PM IST

ಕಥುವಾ (ಜಮ್ಮು): ಗಡಿಯಲ್ಲಿ ಪಾಕಿಸ್ತಾನ ಪದೇ ಪದೆ ಕದನ ವಿರಾಮ ಉಲ್ಲಂಘಿಸುತ್ತಿದ್ದು, ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ 10:10ರ ಸುಮಾರಿಗೆ ಹಿರಾನಗರ ಸೆಕ್ಟರ್​​ನ ಬೊಬಿಯಾನ್​​ ಗಡಿಯಲ್ಲಿ ನಿರಂತರವಾಗಿ ಪಾಕ್ ಗುಂಡಿನ ದಾಳಿ ನಡೆಸಿದೆ. ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ನೀಡಿದೆ. ನಿನ್ನೆ ರಾತ್ರಿಯಿಂದ ಮುಂಜಾನೆ 3 ಗಂಟೆವರೆಗೆ ಇಂಡೋ-ಪಾಕ್ ಸೇನೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಆದರೆ, ಭಾರತೀಯ ಸೇನೆಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

ಜನವರಿ 13 ಹಾಗೂ 23ರಂದು ಹಿಯಾನಗರ ಸೆಕ್ಟರ್​​, ಪನ್ಸಾರ್ ಪ್ರದೇಶದಲ್ಲಿ ಭಯೋತ್ಪಾದಕರು ನುಸುಳಲು ಯತ್ನಿಸಿದ್ದು, ಪಾಕ್​ ಈ ದುಷ್ಕೃತ್ಯಕ್ಕೆ ಸಹಾಯ ಮಾಡಿತ್ತು. ಆದರೆ ಭಾರತೀಯ ಸೇನೆಯು ಪಾಕ್ ಕುತಂತ್ರವನ್ನು ವಿಫಲಗೊಳಿಸಿತ್ತು.

ಗಡಿ ಕಾವಲು ಪಡೆ ಅಂತಾರಾಷ್ಟ್ರೀಯ ಗಡಿ ಉದ್ದಕ್ಕೂ 150 ಮೀಟರ್ ಉದ್ದದ ಸುರಂಗಗಳನ್ನು ಪತ್ತೆ ಮಾಡಿದೆ.

ABOUT THE AUTHOR

...view details