ಶ್ರೀನಗರ(ಜಮ್ಮು-ಕಾಶ್ಮೀರ) :ಜಮ್ಮು-ಕಾಶ್ಮೀರದ ಉರಿ ಸೆಕ್ಟರ್ನಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಭಾರತೀಯ ಯೋಧರು ಓರ್ವ ಉಗ್ರನನ್ನ ಹತ್ಯೆಗೈದಿದ್ದಾರೆ. ಇದರ ಬೆನ್ನಲ್ಲೇ ಮತ್ತೋರ್ವ ಉಗ್ರ ಶರಣಾಗಿದ್ದಾನೆಂದು ತಿಳಿದು ಬಂದಿದೆ.
19 ವರ್ಷದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಭಯೋತ್ಪಾದಕ ಎಂದು ತಿಳಿದು ಬಂದಿದೆ. ಬಂಧಿತ ಉಗ್ರನನ್ನ ಪಾಕಿಸ್ತಾನದ ಪಂಜಾಬ್ನ ಅಲಿ ಬಾಬರ್ ಎಂದು ಗುರುತಿಸಲಾಗಿದೆ. ಆತ ಎಲ್ಇಟಿ ಸದಸ್ಯನೆಂದು ಒಪ್ಪಿಕೊಂಡಿದ್ದಾಗಿ ಭಾರತೀಯ ಸೇನೆ ಖುದ್ದಾಗಿ ತಿಳಿಸಿದೆ.
ಮಾಹಿತಿ ಹಂಚಿಕೊಂಡ ಮೇಜರ್ ಜನರಲ್ ವೀರೇಂದ್ರ ವಾಟ್ಸ್
ಇದನ್ನೂ ಓದಿರಿ:ಬಾಲಕನ ಕೊಂದ ತಾಲಿಬಾನಿಗಳು...ಕ್ರೂರತೆಗೆ ಮತ್ತೊಂದು ಸಾಕ್ಷ್ಯ!
ಶ್ರೀನಗರದ ರಾಜೌರಿಕದಲ್ ಪ್ರದೇಶದಲ್ಲಿ ಉಗ್ರರ ಅಡಗುತಾಣ ನಿರ್ಮಾಣ ಮಾಡಲು ಲಷ್ಕರ್-ಇ-ತೊಯ್ಬಾ ಕಮಾಂಡರ್ ರಿಯಾಜ್ ಸತರ್ಗುಂಡ್ನ ಆದೇಶ ನೀಡಿದ್ದಾಗಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆಂದು ಮೇಜರ್ ಜನರಲ್ ವೀರೇಂದ್ರ ವಾಟ್ಸ್ ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ಭಯೋತ್ಪಾದಕರು ಗಡಿಯೊಳಗೆ ನುಸುಳುವ ಯತ್ನ ಮಾಡ್ತಿದ್ದು, ಭಾರತೀಯ ಯೋಧರು ಅವರಿಗೆ ಸೂಕ್ತ ತಿರುಗೇಟು ನೀಡುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ದೆಹಲಿ ಪೊಲೀಸರು ವಿವಿಧ ರಾಜ್ಯಗಳ ಪೊಲೀಸರ ಸಹಾಯದಿಂದ ಅನೇಕ ಉಗ್ರರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದರು.