ಕರ್ನಾಟಕ

karnataka

ETV Bharat / bharat

ಗಡಿಯಲ್ಲಿ ಪಾಕ್ ಉಪಟಳ.. ಒಂದೇ ತಿಂಗಳಲ್ಲಿ 13 ಬಾರಿ ಕದನ ವಿರಾಮ ಉಲ್ಲಂಘನೆ

ಜಮ್ಮುಕಾಶ್ಮೀರದಲ್ಲಿ ಪಾಕ್ ಸೇನೆ ಉಪಟಳ ಹೆಚ್ಚಾಗಿದ್ದು, ಇಂದು ಪೂಂಚ್​ ಜಿಲ್ಲೆಯ ಮೂರು ಸೆಕ್ಟರ್​ಗಳಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಪಾಕಿಸ್ತಾನ ಒಂದೇ ತಿಂಗಳಲ್ಲಿ 13 ಬಾರಿ ಕದನ ವಿರಾಮ ಉಲ್ಲಂಘಿಸಿದೆ..

Poonch
ಶೆಲ್ ದಾಳಿ

By

Published : Nov 11, 2020, 12:53 PM IST

ಜಮ್ಮು ಮತ್ತು ಕಾಶ್ಮೀರ : ಗಡಿಯಲ್ಲಿ ಪಾಕ್​​ ಸೇನೆಯ ಉಪಟಳ ಹೆಚ್ಚಾಗಿದ್ದು, ಪದೇಪದೆ ಕದನ ವಿರಾಮವನ್ನು ಉಲ್ಲಂಘಿಸಿದೆ. ಪಾಕಿಸ್ತಾನ ಸೇನೆ ಇಂದು ಪೂಂಚ್​​ ಜಿಲ್ಲೆಯ ಎಲ್​ಒಸಿಯ ಮೂರು ವಲಯಗಳಲ್ಲಿ ಭಾರಿ ಪ್ರಮಾಣದ ಶೆಲ್ ದಾಳಿ ನಡೆಸಿದೆ.

ಬೆಳಗ್ಗೆ 9:15ಕ್ಕೆ ಪಾಕ್​ ಸೇನೆ ಪೂಂಚ್​ನ ಕಿರ್ನಿ, ಶಹಪುರ್ ಮತ್ತು ಕಸ್ಬಾ ವಲಯಗಳಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಒಂದೇ ತಿಂಗಳಲ್ಲಿ 13 ಬಾರಿ ಕದನ ವಿರಾಮ ಉಲ್ಲಂಘನೆ

ಅಕ್ಟೋಬರ್ 1ರಂದು ಪೂಂಚ್ ಜಿಲ್ಲೆಯ ಕೃಷ್ಣಗತಿ ಪ್ರದೇಶದಲ್ಲಿ ಪಾಕ್​ ಶೆಲ್ ದಾಳಿ ನಡೆಸಿತ್ತು. ಈ ವೇಳೆ ಓರ್ವ ಯೋಧ ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದರು. ನವೆಂಬರ್ 10 ರಂದು ಕುಗ್ರಾಮಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದೆ.

ವರ್ಷದಲ್ಲಿ 3,200 ಕ್ಕೂ ಅಧಿಕ ಬಾರಿ ಕದನ ವಿರಾಮ ಉಲ್ಲಂಘನೆ

ಈ ವರ್ಷದ ಆರಂಭದಿಂದಲೂ ಎಲ್​ಒಸಿ ಯಲ್ಲಿ ಪಾಕ್​ 3,200 ಕ್ಕೂ ಹೆಚ್ಚು ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ. 24 ಜನರು ಮೃತಪಟ್ಟಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

For All Latest Updates

ABOUT THE AUTHOR

...view details