ಕರಾಚಿ( ಪಾಕಿಸ್ತಾನ): ಬಲೂಚಿಸ್ತಾನ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪಿನ 11 ಉಗ್ರರನ್ನು ಹತ್ಯೆ ಮಾಡಿರುವುದಾಗಿ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಬಲೂಚಿಸ್ತಾನದಲ್ಲಿ 11 ಐಸಿಸ್ ಉಗ್ರರ ಹತ್ಯೆ: ಪಾಕ್ ಅಧಿಕಾರಿಗಳ ಮಾಹಿತಿ - ಮಸ್ತುಂಗ್ ಜಿಲ್ಲೆಯಲ್ಲಿ ಎನ್ಕೌಂಟರ್
ಬಲೂಚಿಸ್ತಾನ ಪ್ರಾಂತ್ಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 11 ಐಸಿಸ್ ಉಗ್ರರನ್ನು ಹತ್ಯೆ ಮಾಡಿರುವುದಾಗಿ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಅಧಿಕಾರಿಗಳು ತಿಳಿಸಿದ್ದಾರೆ.
ಬಲೂಚಿಸ್ತಾನ ಪೊಲೀಸರ ಭಯೋತ್ಪಾದನಾ ನಿಗ್ರಹ ವಿಭಾಗದ ಪ್ರಕಾರ, ಸೋಮವಾರ ರಾತ್ರಿ ಪ್ರಾಂತ್ಯದ ಮಸ್ತುಂಗ್ ಜಿಲ್ಲೆಯ ಕಾಂಪೌಂಡ್‌ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಐಸಿಸ್ ಉಗ್ರರನ್ನು ಹತ್ಯೆ ಮಾಡಲಾಗಿದೆ.
ಭಯೋತ್ಪಾದಕರನ್ನು ಶರಣಾಗುವಂತೆ ಸೂಚಿಸಲಾಯ್ತು ಆದರೆ, ಅವರು ತಮ್ಮತ್ತ ಗುಂಡು ಹಾರಿಸಿದರು, ಇದು ಎನ್ಕೌಂಟರ್ಗೆ ಕಾರಣವಾಯ್ತು. ಈ ಗುಂಡಿನ ಚಕಮಕಿಯಲ್ಲಿ 11 ಉಗ್ರರು ಸಾವನ್ನಪ್ಪಿದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಆಗಸ್ಟ್ 15 ರಂದು ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ನಂತರ ಉಗ್ರರ ಕೃತ್ಯಗಳು ಮತ್ತೆ ಬೆಳಕಿಗೆ ಬಂದಿವೆ ಎಂದು ಅವರು ಹೇಳಿದರು.