ಕರ್ನಾಟಕ

karnataka

ETV Bharat / bharat

ಅಜಿತ್​ ದೋವಲ್ ದಂಗೆಕೋರರ ಮೂಲದ ಒತ್ತಡ ಹೇರುತ್ತಿದ್ದಾರೆ : ಪಾಕ್ ನಿವೃತ್ತ ಸೇನಾಧಿಕಾರಿ ಆರೋಪ - Indo -Pak Border issue

ಬುಡಕಟ್ಟು ಪ್ರದೇಶಗಳಲ್ಲಿನ ಕೆಲವು ರಾಷ್ಟ್ರೀಯವಾದಿಗಳಂತೆ ನಟಿಸುವ ಅಲ್ಲಾ ನಜರ್ ಮತ್ತು ಬಲೂಚಿಸ್ತಾನದ ಬಿಎಲ್‌ಎ ಜೊತೆ ಸೇರಿಸಿ ಮುಂದಿನ ಹಂತದ ಯುದ್ಧದ ಬಗ್ಗೆ ದೋವಲ್​ ಯೋಜನೆ ರೂಪಿಸುತ್ತಿದ್ದಾರೆ ಎಂದು ಪಾಕ್ ನಿವೃತ್ತ ಸೇನಾಧಿಕಾರಿ ತನ್ನ ಲೇಖನದಲ್ಲಿ ಆರೋಪಿಸಿದ್ದಾರೆ.

Article from Pakistani official about Ajit Doval
ಅಜಿತ್​ ದೋವಲ್ ವಿರುದ್ಧ ಪಾಕ್ ಸೇನಾಧಿಕಾರಿ ಆರೋಪ

By

Published : Nov 24, 2020, 9:09 PM IST

ನವದೆಹಲಿ : ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಅವರು ಪಾಶ್ತೂನ್ ಬುಡಕಟ್ಟು ಪ್ರದೇಶ ಮತ್ತು ಬಲೂಚಿಸ್ತಾನದ ದಂಗೆಕೋರರ ಗುಂಪುಗಳ ಮೂಲಕ, ಕಾಶ್ಮೀರ ವಿಷಯದಿಂದ ಹಿಂದೆ ಸರಿದು, ತಮ್ಮ ಆಂತರಿಕ ವಿಷಯದ ಬಗ್ಗೆ ಗಮನ ಹರಿಸುವಂತೆ ಪಾಕ್​ ಸೇನೆಗೆ ಒತ್ತಡ ಹೇರುತ್ತಿದ್ದಾರೆ ಎಂದು ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥರೊಬ್ಬರು ಆರೋಪಿಸಿದ್ದಾರೆ.

ಟ್ರಿಬ್ಯೂನ್.ಕಾಮ್​ನಲ್ಲಿ ನವೆಂಬರ್​ 22 ರಂದು ಪ್ರಕಟವಾಗಿರುವ, ಪಾಕಿಸ್ತಾನದ ಹಿರಿಯ ಅಂಕಣಕಾರ ಮತ್ತು ನಿವೃತ್ತ ಪಾಕಿಸ್ತಾನ ವಾಯುಪಡೆಯ ಅಧಿಕಾರಿ ಏರ್ ವೇಸ್ ಮಾರ್ಷಲ್ ಶಹಜಾದ್ ಚೌಧರಿ ಅವರ 'ದೋವಲ್ ಅವರ ಕೊಳಕು ಯುದ್ಧ' ಎಂಬ ಸಂಪಾದಕೀಯ ಲೇಖನದಲ್ಲಿ, ತೆಹ್ರಿಕೆ-ಎ-ಪಾಕಿಸ್ತಾನ್ ( ಟಿಟಿಪಿ) ಅನ್ನು ವಿಭಜಿಸಿ, ಅದನ್ನು ಬುಡಕಟ್ಟು ಪ್ರದೇಶಗಳಲ್ಲಿನ ಕೆಲವು ರಾಷ್ಟ್ರೀಯವಾದಿಗಳಂತೆ ನಟಿಸುವ ಅಲ್ಲಾ ನಜರ್ ಮತ್ತು ಬಲೂಚಿಸ್ತಾನದ ಬಿಎಲ್‌ಎ ಜೊತೆ ಸೇರಿಸಿ ಮುಂದಿನ ಹಂತದ ಯುದ್ಧದ ಬಗ್ಗೆ ದೋವಲ್​ ಯೋಜನೆ ರೂಪಿಸುತ್ತಿದ್ದಾರೆ.

ಇದು ಈಗಾಗಲೇ ಕಾರ್ಯರೂಪಕ್ಕೆ ಬಂದಿದೆ. ಪಾಕಿಸ್ತಾನವನ್ನು ಕಾಶ್ಮೀರದಿಂದ ದೂರವಿರಿಸಲು ಮತ್ತು ಪಾಕ್​ ಗಡಿಯಿಂದ ನಮ್ಮನ್ನು ದೂರವಿರಿಸಲು ದೋವಲ್​ ಪ್ರಯತ್ನಿಸುತ್ತಿದ್ದಾರೆ ಎಂದು ಚೌಧರಿ ತನ್ನ ಲೇಖನದಲ್ಲಿ ಆರೋಪಿಸಿದ್ದಾರೆ.

ಇದರ ಪರಿಣಾಮವಾಗಿ ನವಾಜ್ ಶರೀಫ್ ರಂತಹ ರಾಜಕಾರಣಿಗಳು ಪಾಕಿಸ್ತಾನ ಸೇನೆಯ ಅಧಿಕಾರಿಗಳ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಷ್ಟ್ರದಲ್ಲಿ ಚುನಾವಣೆ ನಡೆಸಲು ಒತ್ತಾಯಿಸಿ, ಪ್ರಜಾಪ್ರಭುತ್ವದಲ್ಲಿ ಮಧ್ಯಪ್ರವೇಶಿಸುತ್ತಿದ್ದಾರೆ ಎಂದು ಚೌಧರಿ ದೂರಿದ್ದಾರೆ.

ABOUT THE AUTHOR

...view details