ಕರ್ನಾಟಕ

karnataka

ETV Bharat / bharat

ಗುರು ಅರ್ಜನ್ ದೇವ್ ಹುತಾತ್ಮ ದಿನ ಹಿನ್ನೆಲೆ: ಸಿಖ್ ಯಾತ್ರಾರ್ಥಿಗಳಿಗೆ 163 ವೀಸಾ ನೀಡಿದ ಪಾಕ್ - ಸಿಖ್ ಯಾತ್ರಾರ್ಥಿಗಳಿಗೆ 163 ವೀಸಾಗಳನ್ನು ನೀಡಿದ ಪಾಕ್

ಸಿಖ್ ಯಾತ್ರಾರ್ಥಿಗಳಿಗೆ 163 ವೀಸಾಗಳನ್ನು ಪಾಕಿಸ್ತಾನ ನೀಡಿದೆ. ಈ ವೀಸಾಗಳ ವಿತರಣೆ 1974 ರ ಧಾರ್ಮಿಕ ದೇಗುಲಗಳಿಗೆ ಭೇಟಿ ನೀಡುವ ಪಾಕಿಸ್ತಾನ - ಭಾರತ ಪ್ರೋಟೋಕಾಲ್‌ನ ಚೌಕಟ್ಟಿನ ಅಡಿ ನೀಡಲಾಗಿದೆ. ಪ್ರತಿ ವರ್ಷ, ಭಾರತದಿಂದ ಹೆಚ್ಚಿನ ಸಂಖ್ಯೆಯ ಸಿಖ್ ಯಾತ್ರಿಗಳು ವಿವಿಧ ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾರೆ.

visas to Sikh pilgrims for martyrdom day of Guru Arjan Dev
ಸಿಖ್ ಯಾತ್ರಾರ್ಥಿಗಳಿಗೆ 163 ವೀಸಾಗಳನ್ನು ನೀಡಿದ ಪಾಕ್

By

Published : Jun 7, 2022, 6:57 PM IST

ನವದೆಹಲಿ:ಜೂನ್ 8 ರಿಂದ 17 ರವರೆಗೆ ನಡೆಯಲಿರುವ ಸಿಖ್​ರ ಹಬ್ಬದ ಪ್ರಯುಕ್ತ ಯಾತ್ರಾರ್ಥಿಗಳಿಗೆ ಪಾಕಿಸ್ತಾನ ಮಂಗಳವಾರ 163 ವೀಸಾಗಳನ್ನು ನೀಡಿದೆ. ಗುರು ಅರ್ಜನ್ ದೇವ್ ಅವರ ಹುತಾತ್ಮ ದಿನದ ಮುನ್ನಾದಿನದಂದು ಪಾಕಿಸ್ತಾನದ ಹೈಕಮಿಷನ್ ಈ ಕ್ರಮ ತೆಗೆದುಕೊಂಡಿದೆ.

ಪಾಕಿಸ್ತಾನದ ಹೈಕಮಿಷನ್ ಪತ್ರಿಕಾ ಪ್ರಕಟಣೆಯನ್ನು ಓದಿದ ಚಾರ್ಜ್ ಡಿ' ಅಫೇರ್ಸ್ ಅಫ್ತಾಬ್ ಹಸನ್ ಖಾನ್, ಯಾತ್ರಾರ್ಥಿಗಳಿಗೆ ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಇದೇ ವೇಳೆ ಯಾತ್ರೆಗೆ ಶುಭವಾಗಲಿ ಎಂದು ಹಾರೈಸಿದರು.

ವೀಸಾಗಳ ವಿತರಣೆಯು 1974 ರ ಧಾರ್ಮಿಕ ದೇಗುಲಗಳಿಗೆ ಭೇಟಿ ನೀಡುವ ಪಾಕಿಸ್ತಾನ - ಭಾರತ ಪ್ರೋಟೋಕಾಲ್‌ನ ಚೌಕಟ್ಟಿನ ಅಡಿ ಒಳಗೊಂಡಿದೆ. ಪ್ರತಿ ವರ್ಷ, ಭಾರತದಿಂದ ಹೆಚ್ಚಿನ ಸಂಖ್ಯೆಯ ಸಿಖ್ ಯಾತ್ರಿಗಳು ವಿವಿಧ ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾರೆ.

ಇದನ್ನೂ ಓದಿ:ನೂಪುರ್​ ಶರ್ಮಾ ವಿರುದ್ಧ ತನಿಖೆಗೆ ಮುಂಬೈ ಸರ್ಕಾರ ಸೂಚನೆ.. ನೋಟಿಸ್​ ನೀಡಿದ ಪೊಲೀಸ್​ ಇಲಾಖೆ

ನವದೆಹಲಿಯಿಂದ ನೀಡಲಾದ ವೀಸಾಗಳು ಇತರ ದೇಶಗಳಿಂದ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಿಖ್ ಯಾತ್ರಾರ್ಥಿಗಳಿಗೆ ನೀಡಲಾದ ವೀಸಾಗಳಿಗೆ ಹೆಚ್ಚುವರಿಯಾಗಿವೆ. ಭೇಟಿಯ ಸಮಯದಲ್ಲಿ, ಯಾತ್ರಾರ್ಥಿಗಳು ಪಂಜಾಬ್​ ಸಾಹಿಬ್, ನಂಕಾನಾ ಸಾಹಿಬ್ ಮತ್ತು ಕರ್ತಾರ್ಪುರ್ ಸಾಹಿಬ್​ಗೆ ಹೋಗುತ್ತಾರೆ. ಯತ್ರಾರ್ಥಿಗಳು ಜೂನ್ 8 ರಂದು ಪಾಕಿಸ್ತಾನವನ್ನು ಪ್ರವೇಶಿಸಿ, ಜೂನ್ 17, 2022 ರಂದು ಭಾರತಕ್ಕೆ ಹಿಂತಿರುಗುತ್ತಾರೆ ಎಂದು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ABOUT THE AUTHOR

...view details