ಅಹಮದಾಬಾದ್(ಗುಜರಾತ್):ಭಾರತದ ಜಲಗಡಿ ಪ್ರವೇಶಿಸಿದ್ದ ಪಾಕಿಸ್ತಾನದ ಬೋಟ್ ಅನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ವಶಕ್ಕೆ ಪ್ರವೇಶಿಸಿದ್ದ ಅವರಲ್ಲಿ 10 ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಶನಿವಾರ ರಾತ್ರಿ ಭಾರತೀಯ ಕರಾವಳಿ ಪಡೆಗೆ ಸೇರಿದ ಐಸಿಜಿಎಸ್ ಅಂಕಿತ್ ಶಿಪ್ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆಯಲ್ಲಿ 'ಯಾಸಿನ್' ಹೆಸರಿನ ಪಾಕ್ ಬೋಟ್ ಭಾರತದ ಜಲ ಗಡಿ ಪ್ರವೇಶಿಸಿದ್ದು ಗೊತ್ತಾಗಿದ್ದು, ತಕ್ಷಣ ಅದನ್ನು ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ಅದರಲ್ಲಿದ್ದ 10 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಪ್ಪಿಸಿಕೊಳ್ಳಲು ಯತ್ನ:ಭಾರತದ ಜಲಗಡಿಯೊಳಗೆ ಸುಮಾರು 6ರಿಂದ 7 ಮೈಲು ಒಳಗೆ ಪಾಕ್ ಬೋಟ್ ಪ್ರವೇಶಿಸಿದ್ದು, ಭಾರತೀಯ ಕೋಸ್ಟ್ಗಾರ್ಡ್ನ ಶಿಪ್ ನೋಡಿದ ತಕ್ಷಣ ತಪ್ಪಿಸಿಕೊಳ್ಳಲು ಯತ್ನಿಸಿತು. ಇದನ್ನು ಬೆನ್ನತ್ತಿದ ಭಾರತೀಯ ಕೋಸ್ಟ್ಗಾರ್ಡ್ನ ಶಿಪ್ ಅಂಕಿತ್ ಯಾಸಿನ್ ಅನ್ನು ವಶಕ್ಕೆ ಪಡೆದುಕೊಂಡಿದೆ.