ಕರ್ನಾಟಕ

karnataka

ETV Bharat / bharat

ಪಾಕ್ ಬ್ಯಾಂಕ್ ವ್ಯವಸ್ಥಾಪಕನನ್ನು ಗುಂಡಿಕ್ಕಿ ಕೊಂದ ಭದ್ರತಾ ಸಿಬ್ಬಂದಿ: ಕೃತ್ಯಕ್ಕೆ 'ಧರ್ಮನಿಂದನೆ'ಯೇ ಕಾರಣವಂತೆ...!! - Pakistan National Bank's manager was shot dead

ಸರ್ಕಾರಿ ನ್ಯಾಷನಲ್ ಬ್ಯಾಂಕ್ ಆಫ್ ಪಾಕಿಸ್ತಾನದ ಹಿರಿಯ ವ್ಯವಸ್ಥಾಪಕರನ್ನು ಬ್ಯಾಂಕಿನ ಭದ್ರತಾ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದು, ಧರ್ಮನಿಂದೆಯೇ ತಾನು ಮಾಡಿದ ಕೊಲೆಗೆ ಕಾರಣ ಎಂದಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Pak bank manager shot dead by security guard over 'blasphemy'
ಪಾಕ್ ಬ್ಯಾಂಕ್ ವ್ಯವಸ್ಥಾಪಕನನ್ನು ಗುಂಡಿಕ್ಕಿ ಕೊಂದ ಭದ್ರತಾ ಸಿಬ್ಬಂದಿ: ಕೃತ್ಯಕ್ಕೆ 'ಧರ್ಮನಿಂದನೆ'ಯೇ ಕಾರಣವಂತೆ...!!

By

Published : Nov 5, 2020, 10:20 PM IST

ಲಾಹೋರ್:ದೇಶದ ಪಂಜಾಬ್ ಪ್ರಾಂತ್ಯದಲ್ಲಿ ಧರ್ಮನಿಂದೆಯ ಆರೋಪದ ಮೇಲೆ ಸರ್ಕಾರಿ ನ್ಯಾಷನಲ್ ಬ್ಯಾಂಕ್ ಆಫ್ ಪಾಕಿಸ್ತಾನದ ಹಿರಿಯ ವ್ಯವಸ್ಥಾಪಕರನ್ನು ಬ್ಯಾಂಕಿನ ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಖುಷಾಬ್‌ನ ಬಹುರಾಷ್ಟ್ರೀಯ ವಾಣಿಜ್ಯ ಬ್ಯಾಂಕಿನ ಖೈದಾಬಾದ್ ತಹಸಿಲ್ ವ್ಯವಸ್ಥಾಪಕ ಮಲಿಕ್ ಇಮ್ರಾನ್ ಹನೀಫ್ ಅವರನ್ನು ಬುಧವಾರ ಬೆಳಿಗ್ಗೆ ಬ್ಯಾಂಕಿನ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಿವೃತ್ತ ಸೇನಾ ಸಿಬ್ಬಂದಿ ಅಹ್ಮದ್ ನವಾಜ್ ಗುಂಡು ಹಾರಿಸಿ ಕೊಂದಿದ್ದಾರೆ.

ವೈಯಕ್ತಿಕ ದ್ವೇಷದಿಂದ ಆರೋಪಿಯು ಕೊಲೆಯೆಸಗಿದ್ದ, ಈಗ ತನ್ನನ್ನು ರಕ್ಷಿಸಿಕೊಳ್ಳಲು ಗಾರ್ಡ್ ಧರ್ಮನಿಂದೆಯ ಹೊದಿಕೆಯನ್ನು ಬಳಸುತ್ತಿದ್ದಾನೆ ಎಂದು ಮೃತನ ಕುಟುಂಬಸ್ಥರು ಹೇಳಿಕೊಂಡಿದ್ದಾರೆ.

ಗುಂಡಿನ ದಾಳಿಯಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದ ಮ್ಯಾನೇಜರ್‌ನನ್ನು ಲಾಹೋರ್‌ನ ಸೇವಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಆದರೆ ಆತ ಅಲ್ಲಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿ ನವಾಜ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details