ಕರ್ನಾಟಕ

karnataka

ETV Bharat / bharat

ಬೈಕ್​ಗೆ ಡಿಕ್ಕಿ ಹೊಡೆದ ಟ್ರಕ್​: ಅಣ್ಣ, ತಂಗಿಯ ದಾರುಣ ಸಾವು - ಬೈಕ್​ಗೆ ಡಿಕ್ಕಿ ಹೊಡೆದ ಟ್ರಕ್

ಶ್ರೀ ಮುಕ್ತಸರ ಸಾಹಿಬ್‌ನ ಜಲಾಲಾಬಾದ್ ರಸ್ತೆಯ ಸ್ಮಾರಕ ದ್ವಾರದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಬರವಾಲಾ ಗ್ರಾಮದ ಸಹೋದರ ಮತ್ತು ಸಹೋದರಿ ಮೃತಪಟ್ಟಿದ್ದಾರೆ. ಮೃತರ ಕಿರಿಯ ಸಹೋದರ ಗಂಭೀರವಾಗಿ ಗಾಯಗೊಂಡಿದ್ದಾರೆ.

painful accident happened in Muktsar
ಸಹೋದರ, ಸಹೋದರಿ ಸಾವು

By

Published : Dec 7, 2022, 5:34 PM IST

Updated : Dec 7, 2022, 6:12 PM IST

ಶ್ರೀ ಮುಕ್ತಸರ ಸಾಹಿಬ್ (ಪಂಜಾಬ್​​): ಜಿಲ್ಲೆಯ ಜಲಾಲಾಬಾದ್ ರಸ್ತೆಯ ಸ್ಮಾರಕ ದ್ವಾರದ ಬಳಿ ರಸ್ತೆ ಅಪಘಾತ ಸಂಭವಿಸಿದ್ದು, ಕಬರ್ವಾಲಾ ಗ್ರಾಮದ ನಿವಾಸಿಗಳಾದ ಸಹೋದರ, ಸಹೋದರಿ ಮೃತಪಟ್ಟಿದ್ದಾರೆ. ಮೃತರ ಕಿರಿಯ ಸಹೋದರ ಕೂಡ ಗಾಯಗೊಂಡಿದ್ದು ಭೂಚೋ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅನುಸರ್ ಮುಕ್ತಸರದ ಅಕಾಲ್ ಅಕಾಡೆಮಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈ ಮೂವರೂ ವಿದ್ಯಾರ್ಥಿಗಳು ಬೆಳಗ್ಗೆ ದ್ವಿಚಕ್ರವಾಹನದಲ್ಲಿ ಶಾಲೆಗೆ ಬರುತ್ತಿದ್ದರು. ಜಲಾಲಾಬಾದ್ ರಸ್ತೆಯ ಸ್ಮಾರಕ ದ್ವಾರದ ಬಳಿ ಬಂದಾಗ ಟ್ರಕ್ ಇವರ ಬೈಕ್​ಗೆ ಡಿಕ್ಕಿಯಾಗಿದೆ.

ಸ್ಮಾರಕ ದ್ವಾರದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತ

ದುರ್ಘಟನೆಯಲ್ಲಿ ಹರೀಂದರ್ ಸಿಂಗ್ ಅವರ ಪುತ್ರ 15 ವರ್ಷದ ಗುರುಸೇವಕ್ ಸಿಂಗ್, ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಆತನ ಸಹೋದರಿ 12 ವರ್ಷದ ಪ್ರಭ್ಜೋತ್ ಕೌರ್ ಸ್ಥಳದಲ್ಲೇ ಮೃತಪಟ್ಟರು. 8 ವರ್ಷದ ಕಿರಿಯ ಸಹೋದರ ನವತೇಜ್ ಕೂಡ ಗಾಯಗೊಂಡಿದ್ದಾರೆ.

ಇದನ್ನೂ ಓದಿ:ಕಲಬುರಗಿಯಲ್ಲಿ ಕಂಟೇನರ್​ ಕಾರು ಮಧ್ಯೆ ಭೀಕರ ಅಪಘಾತ: ಸಿಪಿಐ ದಂಪತಿ ದುರ್ಮರಣ

Last Updated : Dec 7, 2022, 6:12 PM IST

ABOUT THE AUTHOR

...view details