ನವದೆಹಲಿ:2022ನೇ ಸಾಲಿನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಣೆಯಾಗಿದ್ದು, 128 ಸಾಧಕರಿಗೆ ಪ್ರಶಸ್ತಿ ಘೋಷಿಸಿ ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದೆ. ಇದರಲ್ಲಿ ಪ್ರಮುಖವಾಗಿ ಮೈಕ್ರೋಸಾಫ್ಟ್ ಕಂಪನಿ ಸಿಇಒ ಸತ್ಯ ನಾದೆಲ್ಲಾ, ಗೂಗಲ್ನ ಸಿಇಒ ಸುಂದರ್ ಪಿಚೈ ಅವರನ್ನು ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಭಾರತ ರತ್ನ ಮತ್ತು ಪದ್ಮವಿಭೂಷಣ ನಂತರ ನೀಡಲಾಗುವ ಪದ್ಮಭೂಷಣ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದ್ದು, ಇವರ ಸಾಧನೆ ಗುರುತಿಸಿ ಈ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿರಿ:ಸಿಡಿಎಸ್ ಬಿಪಿನ್ ರಾವತ್ಗೆ ಮರಣೋತ್ತರ ಪದ್ಮವಿಭೂಷಣ.. ಕೋವ್ಯಾಕ್ಸಿನ್ ತಯಾರಕ ಕೃಷ್ಣ ಎಲ್ಲಾ, ಪೂನಾವಾಲಾಗೂ ಗೌರವ
ಅಮೆರಿಕದ ಮೈಕ್ರೋಸಾಫ್ಟ್ ಕಂಪನಿಯ ಸಿಇಒ ಆಗಿರುವ ಭಾರತ ಮೂಲದ ಸತ್ಯ ನಾದೆಲ್ಲಾ ಕಳೆದ ವರ್ಷ ಜೂನ್ ತಿಂಗಳಲ್ಲಿ ಕಂಪನಿಯ ಸಿಇಒ ಆಗಿ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ಮತ್ತೋರ್ವ ಭಾರತೀಯ ಗೂಗಲ್ ಸಿಇಒ ಸುಂದರ್ ಪಿಚೈಗೂ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿರುವ ಗೂಗಲ್ ಪ್ರಧಾನ ಕಚೇರಿಯಲ್ಲಿ ಇವರು ಸೇವೆ ಸಲ್ಲಿಸುತ್ತಿದ್ದು, ಇವರ ಸಾಧನೆಗೆ ಈ ಗೌರವ ಒಲಿದು ಬಂದಿದೆ.
2022ರಲ್ಲಿ ಪದ್ಮಭೂಷಣ ಪಡೆದ ಸಾಧಕರು
- ಗುಲಾಬ್ ನಬಿ ಆಜಾದ್(ಜಮ್ಮು-ಕಾಶ್ಮೀರ)
- ವಿಕ್ಟೋರ್ ಬ್ಯಾನರ್ಜಿ(ಪಶ್ಚಿಮ ಬಂಗಾಳ)
- ಗುರ್ಮಿತ್ ಬಾವಾ(ಪಂಜಾಬ್)
- ಪ.ಬಂಗಾಳ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ
- ನಟರಾಜನ್ ಚಂದ್ರಶೇಖರನ್(ಮಹಾರಾಷ್ಟ್ರ)
- ಕೃಷ್ಣ ಎಲ್ಲಾ, ಸುಚಿತ್ರಾ ಎಲ್ಲ(ತೆಲಂಗಾಣ)
- ಮಾಧೂರ್ ಜಾಫ್ರೆ(ಯುಎಸ್)
- ದೇವೇಂದ್ರ ಜಝಾರಿಯಾ(ರಾಜಸ್ಥಾನ)
- ರಾಶೀದ್ ಖಾನ್(ಉತ್ತರ ಪ್ರದೇಶ
- ರಾಜೀವ್ ಮೆಹರ್ಷಿ(ರಾಜಸ್ಥಾನ)
- ಸತ್ಯ ನಾರಾಯಣ ನಾದೆಲ್ಲಾ(ಯುಎಸ್)
- ಸುಂದರ್ ಪಿಚೈ( ಯುಎಸ್)
- ಪೂನಾವಾಲಾ( ಮಹಾರಾಷ್ಟ್ರ)
- ಸಂಜಯ್ ರಾಜರಾಮ್(ಮೆಕ್ಸಿಕೊ)
- ಪ್ರತಿಭಾ ರಾಯ್(ಒಡಿಶಾ)
- ಸ್ವಾಮಿ ಸಚ್ಚಿದಾನಂದ(ಗುಜರಾತ್)
- ಶ್ರೀ ವೈಶಿಷ್ಟ ತ್ರಿಪ್ತಿ(ಉತ್ತರ ಪ್ರದೇಶ)
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ