ಕರ್ನಾಟಕ

karnataka

ETV Bharat / bharat

ಸಿಗರೇಟ್ ಹಣ ಕೇಳಿದ್ದಕ್ಕೆ ಪಾನ್ ಅಂಗಡಿ ಮಾಲೀಕನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು - ಪಾನ್ ಅಂಗಡಿ

ಸಿಗರೇಟ್‌ದ ಹಣದ ಕೇಳಿದಕ್ಕಾಗಿ ಪಾನ್ ಅಂಗಡಿಯವನನ್ನು ದುಷ್ಕರ್ಮಿಗಳು ಗಂಡಿಕ್ಕಿ ಕೊಂದಿರುವ ಘಟನೆ ಬಿಹಾರದ ಬೇಗುಸರಾಯ್​ ನಗರದಲ್ಲಿ ಜರುಗಿದೆ.

Begusarai City Police
ಬೇಗುಸರಾಯ್ ನಗರ ಪೊಲೀಸರು

By

Published : Dec 17, 2022, 7:45 PM IST

ಬೇಗುಸರಾಯ್‌(ಬಿಹಾರ):ಸಿಗರೇಟ್‌ದ ಹಣದ ಕೇಳಿದಕ್ಕಾಗಿ ದುಷ್ಕರ್ಮಿಗಳು ಪಾನ್ ಅಂಗಡಿಯವನನ್ನು ಗುಂಡಿಕ್ಕಿ ಕೊಂದಿರುವ ಘಟನೆ ಬಿಹಾರದ ಬೇಗುಸರಾಯ್​ ನಗರದ ಲೋಹಿಯಾನಗರ ಗುಮ್ಟಿ ಪ್ರದೇಶದ ಬಳಿ ನಡೆದಿದೆ. ಸಹರ್ಸಾ ಜಿಲ್ಲೆಯ ಬರಿಯಾರ್ಪುರ್ ನಯಾ ತೋಲಾ ನಿವಾಸಿ ಅಂಗಡಿಯ ದಿಲ್ಖುಷ್ ಕುಮಾರ್(31) ಮೃತ ವ್ಯಕ್ತಿ. ಗಾಂಜಾ ಮಾರಾಟದ ವಿಚಾರವಾಗಿ ನಡೆದಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗುತ್ತಿದೆ.

ಗುಂಡು ಹಾರಿಸಿದವನು ಆಗಾಗ್ಗೆ ದಿಲ್ಖುಷ್ ಅಂಗಡಿಗೆ ಬರುತ್ತಿದ್ದ. ಇಂದೂ ಕೂಡ ಕೆಲವರ ಜತೆ ಅಂಗಡಿಗೆ ಬಂದಿದ್ದನು.ಮೂರ್ನಾಲ್ಕು ಯುವಕರು ಬಂದು ಸಿಗರೇಟ್ ಸೇದಲು ಆರಂಭಿಸಿದ್ದಾರೆ. ದಿಲ್ಖುಷ್ ಹಣ ಕೇಳಿದಾಗ ಎದೆಗೆ ಗುಂಡು ಹಾರಿಸಿ ಕೈ ಬೀಸಿ ಓಡಿ ಹೋಗಿದ್ದಾರೆ. ಅದೇನು ಮಾಮೂಲಿ ಜಗಳ ಇರಬಹುದೆಂದು ಉಹಿಸಿದ್ದೆವು.

ಜಗಳ ವಿಕೋಪಕ್ಕೆ ತಿರುಗಿ ದುಷ್ಕರ್ಮಿಗಳು ದಿಲ್​ಖುಷ್​​ನ್ನು ಗುಂಡಿಕ್ಕಿ ಕೊಂದರು. ಈ ಕೊಲೆ ಘಟನೆ ಬಳಿಕ ಚೌಕದಲ್ಲಿ ಅವ್ಯವಸ್ಥೆ ಉಂಟಾಯಿತು. ಜನರು ಅಲ್ಲಿ-ಇಲ್ಲಿ ಓಡಲು ಪ್ರಾರಂಭಿಸಿದರು. ಮತ್ತೊಂದೆಡೆ ದುಷ್ಕರ್ಮಿಗಳೆಲ್ಲ ಆಯುಧಗಳನ್ನು ಬೀಸುತ್ತ ಓಡಿಹೋದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಾಹಿತಿ ಲಭಿಸಿದ ತಕ್ಷಣ ಸ್ಥಳಕ್ಕಾಗಮಿಸಿದ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪಾನ್ ಅಂಗಡಿ ವ್ಯಾಪಾರಿಯು ಗಾಂಜಾ ತುಂಬಿದ ಸಿಗರೇಟುಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದನು ಎಂದು ಬೇಗುಸರಾಯ್ ನಗರ ಪೊಲೀಸರು ತಿಳಿಸಿದ್ದಾರೆ.

ಇದನ್ನೂಓದಿ:ಮದುವೆಯಾದ 3 ತಿಂಗಳಿಗೆ ವ್ಯಕ್ತಿ ಆತ್ಯಹತ್ಯೆ; ಹೆಂಡತಿ ಕಿರುಕುಳ ಕಾರಣವೆಂದ ಪೋಷಕರು

ABOUT THE AUTHOR

...view details