ಕೋಲ್ಕತಾ(ಪಶ್ಚಿಮ ಬಂಗಾಳ):ಇಲ್ಲಿನ ಮಾಜಿ ಸಿಎಂ ಬುದ್ಧದೇಬ್ ಭಟ್ಟಾಚಾರ್ಯ ಇತ್ತೀಚಿಗೆ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಈ ಬಳಿಕ ಅವರನ್ನು ಹೋಂ ಐಸೋಲೇಷನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಕಳೆದ ರಾತ್ರಿ ಇದ್ದಕ್ಕಿಂದ್ದಂತೆ ಆಕ್ಸಿಜನ್ ಮಟ್ಟ ಕುಸಿದಿದ್ದು, ಇಂದು ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಗಾಳ ಮಾಜಿ ಸಿಎಂ ಬುದ್ಧದೇಬ್ಗೆ ಆಕ್ಸಿಜನ್ ಮಟ್ಟ ಕುಸಿತ : ಆಸ್ಪತ್ರೆಗೆ ದಾಖಲು - west Bengal Ex CM Buddadeb bhattacharya news
ಪಶ್ಚಿಮ ಬಂಗಾಳ ಮಾಜಿ ಸಿಎಂ ಬುದ್ಧದೇಬ್ ಭಟ್ಟಾಚಾರ್ಯ ದೇಹದಲ್ಲಿ ಆಮ್ಲಜನಕದ ಮಟ್ಟ ಇದ್ದಕ್ಕಿದ್ದಂತೆ ಕುಸಿಯಲಾರಂಭಿಸಿದ್ದು, ಅಲಿಪೋರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ..
ಕೆಲ ದಿನಗಳ ಹಿಂದೆ ಬುದ್ಧದೇಬ್ ಭಟ್ಟಾಚಾರ್ಯ ಮತ್ತು ಅವರ ಪತ್ನಿ ಮೀರಾ ಭಟ್ಟಾಚಾರ್ಯ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ, ಪತ್ನಿ ಮೀರಾ ಭಟ್ಟಾಚಾರ್ಯ ಮಾತ್ರ ಆಸ್ಪತ್ರೆ ದಾಖಲಾಗಿದ್ದರು. ಇದೀಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡು ಮನೆಗೆ ಹಿಂತಿರುಗಿದ್ದರು. ಆದರೆ, ಕಳೆದ ರಾತ್ರಿ ಬುದ್ಧದೇಬ್‌ರ ಆರೋಗ್ಯದಲ್ಲಿ ಏರುಪೇರಾಗಿದೆ.
ಬುದ್ಧದೇಬ್ ದೇಹದಲ್ಲಿ ಆಮ್ಲಜನಕದ ಮಟ್ಟ ಇದ್ದಕ್ಕಿದ್ದಂತೆ ಕುಸಿಯಲಾರಂಭಿಸಿದ್ದು, ಬೆಳಗ್ಗೆ ವೈದ್ಯರು ಆಗಮಿಸಿ ಪರೀಕ್ಷಿಸಿದರು. ಈ ಬಳಿಕ ಆಸ್ಪತ್ರೆಗೆ ದಾಖಲಿಸುವಂತೆ ಶಿಫಾರಸು ಮಾಡಿದರು. ಅಲಿಪೋರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಈಗಾಗಲೇ ಬುದ್ಧದೇಬ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ.