ಥಾಣೆ:ಆಕ್ಸಿಜನ್ ಅಲಭ್ಯತೆಯಿಂದಾಗಿ ಆರು ಜನ ಸಾವನ್ನಪ್ಪಿರುವ ದಾರುಣ ಘಟನೆ ನಗರದ ವೇದಾಂತ ಆಸ್ಪತ್ರೆಯಲ್ಲಿ ನಡೆದಿದೆ.
‘ಮಹಾ’ ಆಕ್ಸಿಜನ್ ಬಿಕ್ಕಟ್ಟು: ಆಮ್ಲಜನಕ ಸಿಗದೇ ಪ್ರಾಣ ಕಳೆದುಕೊಂಡ ಆರು ಜನ - ಥಾಣೆಯಲ್ಲಿ ಆಕ್ಸಿಜನ್ ಅಲಭ್ಯದಿಂದಾಗಿ ಆರು ರೋಗಿಗಳು ಸಾವು,
ಮಹಾರಾಷ್ಟ್ರದಲ್ಲಿ ಕೊರೊನಾ ಸಮಸ್ಯೆ ಅಷ್ಟೇ ಅಲ್ಲ, ದಿನದಿಂದ ದಿನಕ್ಕೆ ಆಕ್ಸಿಜನ್ ಸಮಸ್ಯೆಯೂ ಉಲ್ಬಣಗೊಳ್ಳುತ್ತಿದೆ. ಈಗ ಆಮ್ಲಜನಕ ಸಿಗದೇ ಆರು ಜನ ಪ್ರಾಣ ಕಳೆದುಕೊಂಡಿರುವ ಘಟನೆ ವರದಿಯಾಗಿದೆ.
ಆಮ್ಲಜನಕ ಸಿಗದೇ ಪ್ರಾಣ ಕಳೆದುಕೊಂಡ ಆರು ಜನ
ವರ್ತಕ್ ನಗರದ ಆಸ್ಪತ್ರೆಯಲ್ಲಿ ಆರು ಮಂದಿ ರೋಗಿಗಳು ಸಕಾಲದಲ್ಲಿ ಆಕ್ಸಿಜನ್ ಸಿಗದೆ ಪ್ರಾಣ ಕಳೆದುಕೊಂಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮೃತರ ಸಂಬಂಧಿಕರು ಪ್ರತಿಭಟನೆಗಿಳಿದಿದ್ದಾರೆ.
ಥಾಣೆ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡರು. ಬಳಿಕ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.