ಹೊಸದಿಲ್ಲಿ: ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ಜೂಹಿ ಕೋರೆ ಎಂಬುವರ ಲಿಂಕ್ಡ್‌ಇನ್ ಪೋಸ್ಟ್ ಈಗ ಸಾಕಷ್ಟು ವೈರಲ್ ಆಗುತ್ತಿದೆ. ತುಲನಾತ್ಮಕ ಸಾಮಾಜಿಕ ರಾಜಕಾರಣ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಜೂಹಿ ಅವರ ಲಿಂಕ್ಡ್‌ಇನ್ ಪೋಸ್ಟ್ ಬಳಿಕ ಅಜ್ಜ ಮತ್ತು ಮೊಮ್ಮಗಳ ಕಥೆ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.
ಇದೊಂದು ಹೃದಯ ಸ್ಪರ್ಶಿ ಪೋಸ್ಟ್ ಆಗಿದ್ದು, ಅದರಲ್ಲಿ ಅವರು ತಮ್ಮ ಅಜ್ಜ ಶಿಕ್ಷಣವನ್ನು ಪಡೆಯುವುದರಿಂದ ಹಿಡಿದು ಅವರ ಕನಸು ತನ್ನಿಂದ ಹೇಗೆ ನನಸಾಯಿತು ಎಂಬುದರ ಕುರಿತು ವಿವರಿಸಿದ್ದಾರೆ. ಅವರ ಪೋಸ್ಟ್ ಹೀಗಿದೆ, "1947 ರಲ್ಲಿ ಭಾರತವನ್ನು ಸ್ವತಂತ್ರ ದೇಶವೆಂದು ಘೋಷಿಸಲಾಯಿತು. ಆದರೆ ಪ್ರತಿಯೊಬ್ಬ ಸ್ವತಂತ್ರ ಜೀವನವನ್ನು ನಡೆಸಲು ಅವಕಾಶವಿರಲಿಲ್ಲ. ಆ ವ್ಯಕ್ತಿಗಳಲ್ಲಿ ಒಬ್ಬ ಚಿಕ್ಕ ಶಾಲಾ ವಯಸ್ಸಿನ ಹುಡುಗ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಅತ್ಯಂತ ಕೆಳ ಜಾತಿಯ ಕುಟುಂಬಕ್ಕೆ ಸೇರಿದವನಾಗಿದ್ದ. ಶಾಲಾ ವಯಸ್ಸಿನ ಬಾಲಕನಾಗಿದ್ದರೂ, ಅವನ ಕುಟುಂಬವು ಆತ ಶಾಲೆಗೆ ಹೋಗುವುದನ್ನು ಬಯಸುತ್ತಿರಲಿಲ್ಲ. ಅದಕ್ಕೆ ಪ್ರಮುಖವಾಗಿ ಎರಡು ಕಾರಣಗಳಿದ್ದವು.
ಮೊದಲನೆಯ ಕಾರಣ- 4 ವರ್ಷದ ಹಿರಿಯನಾಗಿ ಆತ ಜಮೀನಿನಲ್ಲಿ ಕೆಲಸ ಮಾಡಬೇಕಾಗಿತ್ತು. ಇದರಿಂದ ಆತನ ಕುಟುಂಬಕ್ಕೆ ಒಂದಿಷ್ಟು ಆಹಾರ ಗಳಿಸಬಹುದಾಗಿತ್ತು. ಎರಡನೆಯ ಕಾರಣವೆಂದರೆ- ಶಾಲೆಯಲ್ಲಿ ಇತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆತನನ್ನು ಹೇಗೆ ನಡೆಸಿಕೊಳ್ಳಬಹುದು ಎಂದು ಅವನ ಪೋಷಕರು ಹೆದರುತ್ತಿದ್ದರು.