ನಂದುರ್ಬಾರ್(ಮಹಾರಾಷ್ಟ್ರ): ನೀವು ಹಲವಾರು ಕುದುರೆಗಳನ್ನು ನೋಡಿರಬಹುದು. ಆದರೆ ಈ ಅಶ್ವ ಬಹಳ ವಿಶೇಷ. ನೋಡೋದಕ್ಕೆ ದಷ್ಟಪುಷ್ಟವಾಗಿ ಕಾಣಿಸುವ ಕುದುರೆಗಳನ್ನು ಖರೀದಿಸೋದಕ್ಕೆ ಸಾಕಷ್ಟು ಜನ ಮುಂದೆ ಬರ್ತಾರಂತೆ. ಐದು ಕೋಟಿ ರೂಪಾಯಿ ಕೊಡ್ತೀನಿ ಅಂತ ಕೆಲವರು ಹೇಳಿದರೂ, ಮಾಲೀಕ ಕುದುರೆ ಕೊಡೋಕೆ ಒಪ್ಪುತ್ತಿಲ್ಲವಂತೆ..
ಹೌದು, ನಂದುರ್ಬಾರ್ ಜಿಲ್ಲೆಯ ಸಾರಂಗಖೇಡಾ ಜಾತ್ರೆಯಲ್ಲಿ ಕುದುರೆಗಳ ವ್ಯಾಪಾರ ಅದ್ಧೂರಿಯಾಗಿ ನಡೆಯುತ್ತಿದೆ. ಇಲ್ಲಿಗೆ ನಾಸಿಕ್ನಿಂದ ಅಸದ್ ಸಯ್ಯದ್ ಎಂಬಾತ ಸುಮಾರು 10 ಕುದುರೆಗಳನ್ನು ಜಾತ್ರೆಗೆ ಮಾರಲು ತಂದಿದ್ದಾನೆ. ಆದರಲ್ಲಿ 'ರಾವಣ್' ಎಂಬ ಕಪ್ಪು ಬಣ್ಣದ ಕುದುರೆ ಎಲ್ಲರನ್ನೂ ಸೆಳೆಯುತ್ತಿದೆ.
ಈ ಕಡುಕಪ್ಪು ಬಣ್ಣದ ಕುದುರೆಗೆ ₹5 ಕೋಟಿ ಕೊಡ್ತೀವಿ ಅಂದ್ರೂ ಈ ವ್ಯಾಪಾರಿ ಒಪ್ಪುತ್ತಿಲ್ಲ. ಈ ವರ್ಷದ ಸಾರಂಗಖೇಡಾ ಜಾತ್ರೆಗೆ ಸುಮಾರು 2 ಸಾವಿರ ಕುದುರೆಗಳು ಬಂದಿದ್ದು, ಕಳೆದ ನಾಲ್ಕು ದಿನಗಳಿಂದ ಸುಮಾರು 278 ಕುದುರೆಗಳ ಮಾರಾಟ ಮಾಡಲಾಗಿದೆ. ಒಟ್ಟು ಒಂದು ಕೋಟಿ ರೂಪಾಯಿಯಷ್ಟು ವಹಿವಾಟು ನಡೆದಿದೆ. ಆದರೆ 'ರಾವಣ'ನ ಬೆಲೆಯೇ ಸದ್ಯಕ್ಕೆ ಐದು ಕೋಟಿ ಎಂದು ಅದರ ಮಾಲೀಕನ ಹೇಳುವ ಮಾತು.