ಹೈದರಾಬಾದ್:ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳ ವೈಫಲ್ಯವೇ ದೇಶಾದ್ಯಂತ ಕೊರೊನಾ ಲಸಿಕೆ ಕೊರತೆಗೆ ಕಾರಣವಾಗಿದೆ ಎಂದು ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲಿಮೀನ್ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿಯಿಂದಾಗಿ ದೇಶದಲ್ಲಿ ಲಸಿಕೆ ಕೊರತೆ ಉಂಟಾಗಿದೆ. ಅವರು ಲಸಿಕೆಗಳ ಬಗ್ಗೆ ತಡವಾಗಿ ಕ್ರಮ ತೆಗೆದುಕೊಂಡರು. ಲಸಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರಿಗೆ ಸುಳ್ಳು ಹೇಳುತ್ತಿದ್ದು, ಪಾರದರ್ಶಕವಾಗಿ ಕೆಲಸ ಮಾಡುತ್ತಿಲ್ಲ. ಮೊದಲ ಡೋಸ್ ಪಡೆದ 4 ವಾರಗಳ ನಂತರ ಎರಡನೇ ಡೋಸ್ ತೆಗೆದುಕೊಳ್ಳಿ ಎಂದು ಹೇಳಲಾಗಿತ್ತು. ನಂತರ ಅದನ್ನು 6 ವಾರಗಳಿಗೆ ಮುಂದೂಡಲಾಗಿದೆ. ಈಗ ಅದು 12-16 ವಾರಗಳಾಗಿದೆ. ಇದು ಅವರ ನೀತಿಯ ವೈಫಲ್ಯವನ್ನು ತೋರಿಸುತ್ತದೆ" ಎಂದರು.