ನವದೆಹಲಿ:ಸಂಸದ ಅಸಾದುದ್ದೀನ್ ಓವೈಸಿ ಪಕ್ಷದ ಅಧ್ಯಕ್ಷರೊಬ್ಬರು ಹಿಂದೂಗಳನ್ನು ಪರೋಕ್ಷವಾಗಿ ಟೀಕಿಸುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದು, ಅವರ ವಿರುದ್ಧ ಕೋಮು ಸೌಹಾರ್ದತೆಗೆ ಧಕ್ಕೆ ತಂದ ಆರೋಪದ ಮೇಲೆ ಕೇಸ್ ಜಡಿಯಲಾಗಿದೆ.
ಉತ್ತರಪ್ರದೇಶದ ಸಂಭಾಲ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ, ಎಐಎಂಐಎಂ ಪಕ್ಷದ ರಾಜ್ಯ ಅಧ್ಯಕ್ಷ ಶೌಕತ್ ಅಲಿ, ಮುಸ್ಲಿಂ ಸಮುದಾಯವನ್ನು ಟೀಕಿಸುವವರು ಒಬ್ಬ ಮಹಿಳೆಯನ್ನು ಮದುವೆಯಾಗಿ, ಮೂವರು ಪ್ರೇಯಸಿಯರನ್ನು ಹೊಂದಿರುತ್ತಾರೆ. ಆ ಮೂಲಕ ಅಕ್ರಮವಾಗಿ ಮಕ್ಕಳು ಹುಟ್ಟು ಹಾಕುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಹಿಂದೂಗಳನ್ನೇ ಉದ್ದೇಶಿಸಿ ಟೀಕಿಸಿದ ಮಾತಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಶೌಕತ್ ಅಲಿಯ ಮಾತಿನ ಹುರುಳು:ವೈರಲ್ ಆದ ವೀಡಿಯೊದಲ್ಲಿರುವಂತೆ, ಮುಸ್ಲಿಮರು ಎರಡು ಮದುವೆಯಾದರೂ ಇಬ್ಬರೂ ಮಹಿಳೆಯರನ್ನು ಗೌರವಿಸುತ್ತಾರೆ. "ನೀವು" ಒಂದೇ ಮದುವೆಯಾದರೂ, ಮೂವರನ್ನು ಇಟ್ಟುಕೊಂಡಿರುತ್ತೀರಿ. ನಿಮ್ಮಂತ ಹುಳು, ಕೀಟಗಳ ಬೆದರಿಕೆಗೆ ಬಗ್ಗಲ್ಲ. ನೀವು ಮೊಘಲ್ ಚಕ್ರವರ್ತಿಗಳ ಮುಂದೆ ನಡುಬಗ್ಗಿಸಿದವರು ಎಂದು ವಾಗ್ದಾಳಿ ನಡೆಸಿದ್ದಾರೆ.