ಹೈದರಾಬಾದ್: ಕುಟುಂಬದ ವಿರೋಧದ ನಡುವೆ ಮುಸ್ಲಿಂ ಸಮುದಾಯದ ಯುವತಿಯೊಬ್ಬಳನ್ನು ವರಿಸಿದ್ದಕ್ಕಾಗಿ 25 ವರ್ಷದ ದಲಿತ ಯುವಕ ನಾಗರಾಜ್‌ನನ್ನು ಹೈದರಾಬಾದ್‌ನಲ್ಲಿ ಕೊಲೆ ಮಾಡಿರುವ ಮರ್ಯಾದಾ ಹತ್ಯೆ ಪ್ರಕರಣವನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಖಂಡಿಸಿ, ಇದು 'ಇಸ್ಲಾಂನಲ್ಲಿ ಅತ್ಯಂತ ಘೋರ ಅಪರಾಧ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇ 4 ರಂದು ರಂಗಾರೆಡ್ಡಿ ಜಿಲ್ಲೆಯ ಮಾರ್ಪಳ್ಳಿ ಗ್ರಾಮದ ವಿಲ್ಲುಪುರಂ ನಾಗರಾಜ್ ಎಂಬುವರನ್ನು ಹೈದರಾಬಾದ್‌ನ ಸರೂರ್‌ನಗರದ ನಡುರಸ್ತೆಯಲ್ಲೇ ಹತ್ಯೆಗೈಯ್ಯಲಾಗಿತ್ತು. ನಾಗರಾಜ್ ಅವರು ಮಾರ್ಪಳ್ಳಿ ಸಮೀಪದ ಘನಾಪುರ ಗ್ರಾಮದ ಸೈಯದ್ ಅಶ್ರೀನ್ ಸುಲ್ತಾನಾ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇದು ಉಭಯ ಕುಟುಂಬಗಳ ವಿರೋಧಕ್ಕೆ ಕಾರಣವಾಗಿತ್ತು. ಅಲ್ಲದೇ, ಕುಟುಂಬದವರ ಅನುಮತಿ ಇಲ್ಲದೇ ಯುವತಿಯನ್ನು ಕರೆದುಕೊಂಡು ಹೋಗಿ ಗೌಪ್ಯವಾಗಿ ಮದುವೆಯಾಗಿ, ಹೈದರಾಬಾದ್‌ನಲ್ಲಿ ಜೀವನ ನಡೆಸುತ್ತಿದ್ದರು.