ಹೈದರಾಬಾದ್ : ಇತ್ತೀಚೆಗೆ ಹೈದರಾಬಾದ್ ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಾಗ ಕೇಂದ್ರ ಸರ್ಕಾರ ಯಾವುದೇ ನೆರವು ನೀಡಿಲ್ಲ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಆಸಾದುದ್ದೀನ್ ಓವೈಸಿ ಹೇಳಿದ್ದಾರೆ. ಅಲ್ಲದೆ, ಮುಂಬರುವ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಗೆ ಕೇಂದ್ರ ಕೋಮು ಬಣ್ಣ ಬಳಿಯಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ನಾವು ವರ್ಷದ ಎಲ್ಲಾ ದಿನವೂ ತೆಲಂಗಾಣಕ್ಕೋಸ್ಕರ ಕೆಲಸ ಮಾಡುತ್ತೇವೆ. ಅರ್ಧ ರಾತ್ರಿಯಲ್ಲಿ ಒಬ್ಬ ನಾಯಕನನ್ನು ಕರೆದು ಕೆಲ ಹೆಸರು ಹೇಳುವಂತೆ ಕೇಳಿದ್ರೂ, ಅವರು ಓವೈಸಿ ಎಂದು ಹೇಳುತ್ತಾರೆ. ಇಷ್ಟಾದರೂ ಬಿಜೆಪಿ ಭಯೋತ್ಪಾದನೆ, ಪಾಕಿಸ್ತಾನ ಎಂದೆಲ್ಲಾ ಹೇಳುತ್ತಿದೆ. 2019 ರ ಬಳಿಕ ಬಿಜೆಪಿ ತೆಲಂಗಾಣಕ್ಕೆ, ವಿಶೇಷವಾಗಿ ಹೈದರಾಬಾದ್ಗೆ ಯಾವ ಆರ್ಥಿಕ ಸಹಾಯ ನೀಡಿದೆ ಎಂದು ಪ್ರಶ್ನಿಸಿದ್ದಾರೆ.
ಹೈದರಾಬಾದ್ ಪ್ರವಾಹಕ್ಕೆ ತುತ್ತಾದಾಗ ಮೋದಿ ಸರ್ಕಾರ ಯಾವ ಆರ್ಥಿಕ ಸಹಾಯವ ನೀಡಿತ್ತು..? ಅವರು ಯಾವುದೇ ಸಹಾಯ ನೀಡಿಲ್ಲ. ಈಗ, ಚುನಾವಣೆಗೆ ಕೋಮು ಬಣ್ಣವ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ಯಾಕೆಂದರೆ ಪ್ರವಾಹ ಸಮಯದಲ್ಲಿ ಅವರು ಯಾವುದೇ ಸಹಾಯ ನೀಡಿರಲಿಲ್ಲ. ಕೋಮು ರಾಜಕೀಯ ಕೆಲಸ ಮಾಡುವುದಿಲ್ಲ, ಜನರಿಗೆ ಈ ಬಗ್ಗೆ ತಿಳಿದಿದೆ ಎಂದು ಓವೈಸಿ ಹೇಳಿದರು.