ಸಾಗರ್:ಮಹಾಮಾರಿ ಕೊರೊನಾದಿಂದ ಸಾವು-ನೋವುಗಳು ಹೆಚ್ಚಾಗುತ್ತಿದ್ದಂತೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಶವಾಗಾರದ ಹೊರಗೆ ಮೃತ ಕೊರೊನಾ ಸೋಂಕಿತರ ಶವಗಳ ರಾಶಿ ಕಾಣುತ್ತಿದೆಯಂತೆ. ಅಂತ್ಯಕ್ರಿಯೆ ಮಾಡುವ ಕಾರ್ಮಿಕರು ಅರ್ಧಂಬರ್ಧ ಸುಟ್ಟ ಶವವನ್ನು ಚಿತಾಗಾರದಿಂದ ಹೊರಗೆಸೆಯುತ್ತಿದ್ದಾರೆ. ರಸ್ತೆ ಬದಿಯಲ್ಲಿ ಬಿದ್ದ ಶವವನ್ನು ನಾಯಿಗಳು ತಿನ್ನುತ್ತಿವೆ ಎಂದು ಸ್ಥಳೀಯ ಜನರು ಆರೋಪಿಸಿದ್ದಾರೆ.
ಮೃತ ಕೋವಿಡ್-19 ಸೋಂಕಿತರ ಅರ್ಧ ಸುಟ್ಟ ದೇಹಗಳಿಂದ ಗಬ್ಬು ವಾಸನೆ ಹರಬ್ಬುತ್ತಿದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡುವ ಭೀತಿ ಎದುರಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಬಗ್ಗೆ ಮಹಾನಗರ ಪಾಲಿಕೆ, ಅಲ್ಲದೇ ಸಾಗರ್ ಜಿಲ್ಲೆಯಲ್ಲಿ, ನರಿಯಾವ್ಲಿ ನಾಕಾ ಮುಕ್ತಿ ಧಾಮ ಶವಾಗಾರವು ತೀವ್ರ ಮರದ ಕೊರತೆಯನ್ನು ಎದುರಿಸುತ್ತಿದೆ. ಕೊರೊನಾ ಸಾವುಗಳು ಉತ್ತುಂಗಕ್ಕೇರಿರುವುದರಿಂದ ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂದರೆ ಶವಗಳನ್ನು ಶವಾಗಾರದ ಹೊರಗೆ ಮತ್ತು ತೆರೆದ ಸ್ಥಳಗಳಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಎಲ್ಲಾ ಶವಗಳನ್ನು ಕೋವಿಡ್ ಪ್ರೋಟೋಕಾಲ್‌ಗಳಿಗೆ ಅನುಸಾರವಾಗಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ ಎಂದು ಹೇಳಿದೆ.