ಭೋಪಾಲ್ (ಮಧ್ಯಪ್ರದೇಶ):ಮಧ್ಯಪ್ರದೇಶದಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಜಿಎಸ್‌ಟಿ ನಕಲಿ ಬಿಲ್ ಹಗರಣ ಬಯಲಾಗಿದೆ. ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ಇಲಾಖೆಯು ನಕಲಿ ಇನ್‌ವಾಯ್ಸ್‌ಗಳನ್ನು ಉತ್ಪಾದಿಸಿ ರವಾನಿಸುವ ಜಿಎಸ್‌ಟಿ ಕ್ರೆಡಿಟ್ ಜಾಲ ಪತ್ತೆ ಹೆಚ್ಚಿದೆ. ಈ ಸಂಬಂಧ ಗುಜರಾತ್‌ನ ಸೂರತ್ನಲ್ಲಿ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೇ 25ರಂದು ನಡೆದ ದಾಳಿಯಲ್ಲಿ ಈ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಇವರಲ್ಲಿ ಒಬ್ಬ ನಕಲಿ ದಂಧೆಯ ಪ್ರಮುಖ ಆಪರೇಟರ್ ಮತ್ತು ಈತನ ಆಪ್ತ ಸಹಚರ ಸೇರಿದ್ದಾನೆ. ಇಬ್ಬರನ್ನೂ ಬಂಧಿಸಿ ತನಿಖೆಗಾಗಿ ಇಂದೋರ್‌ಗೆ ಕರೆ ತರಲಾಗಿದೆ. ಅಲ್ಲದೇ, 500ಕ್ಕೂ ಹೆಚ್ಚು ಸಂಸ್ಥೆಗಳ ನಕಲಿ ದಾಖಲೆಗಳು, ವಸ್ತುಗಳು, ಡೇಟಾ ಮತ್ತು ಹಲವಾರು ಮೊಬೈಲ್ಗಳನ್ನು ಬಂಧಿತರಿಂದ ವಶಕ್ಕೆ ಪಡೆಯಲಾಗಿದೆ. ಇಷ್ಟೇ ಅಲ್ಲ, ಶೋಧ ಕಾರ್ಯಾಚರಣೆ ವೇಳೆ ಸುಮಾರು 300 ಸಂಸ್ಥೆಗಳ ನಕಲಿ ಮುದ್ರೆಗಳು ಮತ್ತು ಲೆಟರ್ ಪ್ಯಾಡ್‌ಗಳನ್ನೂ ಜಪ್ತಿ ಮಾಡಲಾಗಿದೆ.