ನವದೆಹಲಿ :ಕೊರೊನಾ ವೈರಸ್ ವಿರುದ್ಧದ ಹೋರಾಟ ದೇಶದಲ್ಲಿ ಮುಂದುವರೆದಿದೆ. ಡೆಡ್ಲಿ ವೈರಸ್ ಪ್ರಭಾವ ತಗ್ಗಿಸಲು ದೇಶಾದ್ಯಂತ ವ್ಯಾಕ್ಸಿನೇಷನ್ ಅಭಿಯಾನ ಮುಂದುವರೆದಿದೆ. ಜನವರಿ 16ರಿಂದ ಈ ಅಭಿಯಾನ ಆರಂಭಗೊಂಡಿದೆ. ಈವರೆಗೆ ದಾಖಲೆಯ 90 ಕೋಟಿ ಜನರಿಗೆ ಲಸಿಕೆ ಹಾಕಿಸಲಾಗಿದೆ.
ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನಂತರ ಮುಂಚೂಣಿ ಕಾರ್ಯಕರ್ತರಿಗೆ ವ್ಯಾಕ್ಸಿನೇಷನ್ ನೀಡುವ ಕಾರ್ಯ ಶುರುಗೊಂಡಿತ್ತು. ಇದಾದ ಬಳಿಕ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗಿದೆ. ನಂತರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನೇಷನ್ ಹಾಕುವ ಕಾರ್ಯ ಆರಂಭಗೊಂಡಿದೆ.
ಟ್ವೀಟ್ ಮಾಡಿದ ಕೇಂದ್ರ ಆರೋಗ್ಯ ಸಚಿವ
ಭಾರತ ಕೋವಿಡ್ ಲಸಿಕಾ ಅಭಿಯಾನದಲ್ಲಿ ಹೊಸ ಮೈಲಿಗಲ್ಲು ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವ ಮಾನ್ಸುಕ್ ಮಾಂಡವೀಯಾ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ದೇಶದಲ್ಲಿ ಈವರೆಗೆ 90 ಕೋಟಿ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಲಾಲ್ ಬಹದ್ದೂರ್ ಶಾಸ್ತ್ರಿಜೀ 'ಜೈ ಜವಾನ್ ಜೈ ಕಿಸಾನ್' ಘೋಷಣೆ ನೀಡಿದ್ರು. ಅಟಲ್ ಜೀ 'ಜೈ ವಿಜ್ಞಾನ' ಘೋಷಣೆ ನೀಡಿದ್ದರು. ಆದರೆ, ಇದೀಗ ಪ್ರಧಾನಿ ಮೋದಿ 'ಜೈ ಅನುಸಂಧಾನ್'ಘೋಷಣೆ ಕೂಗಿದ್ದಾರೆ. ಅದರ ಪ್ರತಿಫಲವೇ ಕೊರೊನಾ ವ್ಯಾಕ್ಸಿನೇಷನ್ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿರಿ:ಪಿಎಂ ನರೇಂದ್ರ ಮೋದಿ ಟೀಕೆಗಳನ್ನ ಗೌರವಿಸುತ್ತಾರಂತೆ.. ಆದರೆ..