ನವದೆಹಲಿ: ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಾದ ಐಐಟಿಗಳಲ್ಲೂ (ಭಾರತೀಯ ತಂತ್ರಜ್ಞಾನ ಸಂಸ್ಥೆ) ಬೋಧಕರ ಹುದ್ದೆಗಳು ಖಾಲಿ ಇದ್ದು, ಇನ್ನೂ 4,300ಕ್ಕೂ ಅಧಿಕ ಬೋಧಕರ ಹುದ್ದೆಗಳನ್ನು ತುಂಬಬೇಕಿದೆ.
ದೇಶಾದ್ಯಂತ ಇರುವ ಐಐಟಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಕೇಂದ್ರ ಶಿಕ್ಷಣ ಇಲಾಖೆಯ ರಾಜ್ಯ ಸಚಿವ ಸುಭಾಷ್ ಸರ್ಕಾರ್ ಬುಧವಾರ ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಿಗೆ ಮಾಹಿತಿ ನೀಡಿದ್ದಾರೆ. ಸರ್ಕಾರದ ಮಾಹಿತಿ ಪ್ರಕಾರ ಖರಗ್‌ಪುರ ಐಐಟಿಯಲ್ಲಿ ಅತಿ ಹೆಚ್ಚು ಅಂದರೆ 815 ಬೋಧಕರ ಹುದ್ದೆಗಳು ಖಾಲಿ ಇವೆ. ಕರ್ನಾಟಕದ ಧಾರವಾಡ ಐಐಟಿಯಲ್ಲೂ 39 ಹುದ್ದೆಗಳು ಇನ್ನೂ ಖಾಲಿ ಇವೆ.
ಜತೆಗೆ ಬಾಂಬೆ (532), ಧನ್‌ಬಾದ್ (447), ಮದ್ರಾಸ್ (396), ಕಾನ್ಪುರ (351), ರೂರ್ಕಿ (296) ಮತ್ತು ಬಿಎಚ್‌ಯು (289) ದೆಹಲಿ (73), ಭುವನೇಶ್ವರ (115), ಗಾಂಧಿನಗರ (45), ಹೈದ್ರಾಬಾದ್ (132), ಇಂದೋರ್ (81), ಜೋಧ್‌ಪುರ (65), ಮಂಡಿ (73), ಪಾಟ್ನಾ (100), ರೋಪರ್ (69), ತಿರುಪತಿ (18), ಪಾಲಕ್ಕಾಡ್ (24), ಜಮ್ಮು (31), ಭಿಲ್ಲೈ (43) ಹಾಗೂ ಗೋವಾ ಐಐಟಿಯಲ್ಲಿ 40 ಜನ ಅಧ್ಯಾಪಕರ ಹುದ್ದೆಗಳು ಖಾಲಿ ಇವೆ.