ಕರ್ನಾಟಕ

karnataka

ETV Bharat / bharat

ಕೋವಿಡ್‌ ವೇಳೆ ಅನಾಥರಾದ 4 ಸಾವಿರ ಮಕ್ಕಳಿಗೆ ಸಕಲ ರೀತಿಯ ಸೌಲಭ್ಯ: ಕೇಂದ್ರ ಸರ್ಕಾರ - ಕೋವಿಡ್ ಸಂದರ್ಭದಲ್ಲಿ ಮಕ್ಕಳು ಅನಾಥ

ಕೋವಿಡ್-19 ಸಂದರ್ಭದಲ್ಲಿ ದೇಶದ ವಿವಿಧೆಡೆ ನಾಲ್ಕು ಸಾವಿರ ಮಕ್ಕಳು ಅನಾಥರಾಗಿದ್ದು, ಅವರಿಗೆ ಅಗತ್ಯವಿರುವ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ.

children orphaned during Covid-19 pandemic
children orphaned during Covid-19 pandemic

By

Published : Mar 16, 2022, 6:46 PM IST

ನವದೆಹಲಿ:ಮಹಾಮಾರಿ ಕೋವಿಡ್​​ ಸಂದರ್ಭದಲ್ಲಿ ನಾಲ್ಕು ಸಾವಿರ ಮಕ್ಕಳು ಅನಾಥರಾಗಿದ್ದಾರೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ತಿಳಿಸಿದರು.

ರಾಜ್ಯಸಭೆಯಲ್ಲಿ ಮಾಹಿತಿ ನೀಡಿರುವ ಸಚಿವೆ, ಪಿಎಂ ಕೇರ್ಸ್​​ ಯೋಜನೆಯಡಿ ಮಕ್ಕಳ ಸಹಾಯಕ್ಕಾಗಿ 8,973 ಅರ್ಜಿಗಳು ಬಂದಿವೆ. ಈ ಪೈಕಿ 4,302 ಮಕ್ಕಳು ಕೋವಿಡ್​ ಸಂದರ್ಭದಲ್ಲಿ ಅನಾಥರಾಗಿದ್ದಾರೆ ಎಂದರು.

ಇದನ್ನೂ ಓದಿ:'ದಿ ಕಾಶ್ಮೀರಿ ಫೈಲ್ಸ್​​​' ಕಾಶ್ಮೀರಿ ಪಂಡಿತರ ನೋವು, ಸಂಕಟವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ: ಅಮಿತ್ ಶಾ

ಇದರಲ್ಲಿ 212 ಮಕ್ಕಳು 6 ವರ್ಷದೊಳಗಿನವರು, 1,670 ಮಕ್ಕಳು 6ರಿಂದ 14 ವರ್ಷ ವಯಸ್ಸಿನವರು, 2001 ಮಕ್ಕಳು 14ರಿಂದ 18 ವರ್ಷದೊಳಗಿನವರಾಗಿದ್ದು, 418 ಮಕ್ಕಳು 18ರಿಂದ 23 ವರ್ಷದೊಳಗಿನವರಾಗಿದ್ದಾರೆ. ಇವರಿಗೆ ಅಗತ್ಯವಿರುವ ಎಲ್ಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮಕ್ಕಳ ರಕ್ಷಣಾ ಸೇವೆ ಯೋಜನೆ-ಮಿಷನ್ ವಾತ್ಸಲ್ಯದಡಿ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯ ನೆರವು ನೀಡುತ್ತಿರುವುದಾಗಿಯೂ ಸ್ಮೃತಿ ಇರಾನಿ ತಿಳಿಸಿದರು.

ABOUT THE AUTHOR

...view details