ನವದೆಹಲಿ:ಕೋವಿಡ್(COVID) 3 ನೇ ಅಲೆ ಆತಂಕದ ನಡುವೆಯೇ, ದೇಶದಲ್ಲಿ ಕೊರೊನಾ ರೂಪಾಂತರಗಳ 31,124 ಕೇಸ್ಗಳು ಪತ್ತೆಯಾಗಿವೆ ಎಂದು ಭಾರತೀಯ ಸಾರ್ಸ್ ಕೋವ್-2 ಜೀನೋಮಿಕ್ ಕನ್ಸೋರ್ಟಿಯಂ (INSACOG) ಹೇಳಿದೆ.
4,227 ಆಲ್ಫಾ ರೂಪಾಂತರ, 219 ಬೀಟಾ ರೂಪಾಂತರಗಳು, 2 ಗಾಮಾ ರೂಪಾಂತರಗಳು, 21,192 ಡೆಲ್ಟಾ ರೂಪಾಂತರಗಳು ಮತ್ತು 5,417 - ಬಿ .1.1617.1 ಮತ್ತು ಬಿ .1.617.3 ಅನ್ನು ಜಿನೊಮಿಕ್‌ನಿಂದ ಪತ್ತೆ ಮಾಡಲಾಗಿದೆ ಎಂದು 'ಈಟಿವಿ ಭಾರತ'ಕ್ಕೆ INSACOG ನ ಅಂಕಿ-ಅಂಶಗಳು ತಿಳಿಸಿವೆ.
ಭಾರತದಲ್ಲಿ ಡೆಲ್ಟಾ ರೂಪಾಂತರವು ಭಾರಿ ಆತಂಕ ಮೂಡಿಸಿದೆ. ಡೆಲ್ಟಾದ ಭಾಗವಾಗಿರುವ AY.12 ಅನೇಕ ರಾಜ್ಯಗಳಲ್ಲಿ ಕಾಣಿಸಿಕೊಂಡಿದೆ. ಆದರೆ, ಕೆಲ ತಜ್ಞರು ಡೆಲ್ಟಾ ಮತ್ತು AY.12 ಎರಡೂ ಒಂದೇ ಎಂದು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.