ನವದೆಹಲಿ: ಟೆಕ್ ಮತ್ತು ಸ್ಟಾರ್ಟ್‌ಅಪ್ ವಲಯವು ಆರ್ಥಿಕ ಕುಸಿತದಿಂದ ಜರ್ಜರಿತವಾಗಿವೆ. ಈ ವಲಯದಲ್ಲಿ 22,000ಕ್ಕೂ ಹೆಚ್ಚು ನೌಕಕರು 2022ರಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಭಾರತೀಯ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಿಂದ 12,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಕ್ರಂಚ್‌ಬೇಸ್ ವರದಿ ಪ್ರಕಾರ, ಕೋವಿಡ್-19 ಸಾಂಕ್ರಾಮಿಕದಿಂದ ಲಾಭ ಪಡೆದ ಕೆಲ ಸ್ಟಾರ್ಟ್‌ಅಪ್‌ಗಳು ಕೊನೆಯ ಹಂತದಲ್ಲಿ ಕುಸಿಯಲು ಪ್ರಾರಂಭಿಸಿವೆ. ಕೊರೊನಾ ಹಿನ್ನೆಲೆಯಲ್ಲಿ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಮತ್ತೆ ಹೊಸದಾಗಿ ಹೆಚ್ಚು ಹಣ ಸಂಗ್ರಹಿಸುವುದು ಕಷ್ಟಕರ ಎಂದು ಸ್ಟಾರ್ಟ್‌ಅಪ್‌ಗಳು ಹೇಳುತ್ತಿವೆ. ಜಾಗತಿಕವಾಗಿ ನೆಟ್‌ಫ್ಲಿಕ್ಸ್‌ನಂತಹ ಕಂಪನಿಗಳು, ರಾಬಿನ್‌ಹುಡ್ ಮತ್ತು ಹಲವಾರು ಕ್ರಿಪ್ಟೋ ಪ್ಲಾಟ್‌ಫಾರ್ಮ್‌ಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಲು ಮುಂದಾಗಿವೆ.
ಆರ್ಥಿಕ ಬಿರುಗಾಳಿಯಿಂದ ಜರ್ಜರಿತವಾಗಿರುವ ಕ್ರಿಪ್ಟೋ ಜಗತ್ತಿನಲ್ಲಿ Coinbase, Gemini, crypto.com, Vauld, Bybit, Bitpanda ಸೇರಿದಂತೆ ಇತರೆ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ಕಡಿಮೆ ಮಾಡುವುದಾಗಿ ಘೋಷಿಸಿವೆ. ಎಲೋನ್ ಮಸ್ಕ್ ನಡೆಸುತ್ತಿರುವ ಟೆಸ್ಲಾ ಕಂಪನಿಯು ಉದ್ಯೋಗಿಗಳ ಸಂಬಳದಲ್ಲಿ ಶೇ 10ರಷ್ಟು ಕಡಿತಗೊಳಿಸಿದೆ.