ಡೆಹ್ರಾಡೂನ್ (ಉತ್ತರಾಖಂಡ): ಸಂಶಯಾಸ್ಪದ ರೀತಿಯಲ್ಲಿ ಅಖಾರ ಪರಿಷತ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಅವರ ಸಾವಿನ ನಂತರ, ಸಾಧು - ಸಂತರ ಹತ್ಯೆಯ ವಿಷಯ ಮತ್ತೊಮ್ಮೆ ಉದ್ಭವಿಸಿದೆ. ಇಲ್ಲಿಯವರೆಗೆ, ಉತ್ತರಾಖಂಡದಲ್ಲಿ 22ಕ್ಕೂ ಹೆಚ್ಚು ಸಂತರನ್ನು ಹತೈ ಮಾಡಲಾಗಿದೆ. ವರದಿಗಳ ಪ್ರಕಾರ, ಆಸ್ತಿ ವಿವಾದವೇ ಈ ಹತ್ಯೆಗಳ ಹಿಂದಿನ ಪ್ರಮುಖ ಕಾರಣ ಎಂದು ಹೇಳಲಾಗಿದೆ.
ನಿನ್ನೆ ಮಹಾಂತ ನರೇಂದ್ರ ಗಿರಿ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಎಂದು ಹೇಳಲಾಗಿದೆ. ಒಬ್ಬ ಸಾಧು ಈ ರೀತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೇ ಮೊದಲೇನಲ್ಲ, ಈ ಹಿಂದೆ ಕೂಡ ಇಂತಹ ಘಟನೆಗಳು ನಡೆದಿವೆ. ಹತ್ತಾರು ಸಂತರು ಆಸ್ತಿಯ ದುರಾಸೆಯಿಂದ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ರಿಯಲ್ ಎಸ್ಟೇಟ್
ಉತ್ತರಾಖಂಡ ರಾಜ್ಯ ರಚನೆಯಾದ ನಂತರ, ರಿಯಲ್ ಎಸ್ಟೇಟ್ ವ್ಯವಹಾರವು ದೊಡ್ಡ ಉದ್ಯಮವಾಗಿ ಹೊರಹೊಮ್ಮಿತು. ಇದರಲ್ಲಿ ರಾಜಕಾರಣಿಗಳು ಹೆಚ್ಚು ಸಕ್ರಿಯ ಆಗಿರುವ ಕಾರಣ, ಆಶ್ರಮಗಳು, ಮಠಗಳು ಮತ್ತು ದೇವಸ್ಥಾನಗಳಿಗೆ ಒದಗಿಸಲಾದ ಭೂಮಿಯಲ್ಲಿ ಹಲವಾರು ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ಮಾಫಿಯಾದಲ್ಲಿ ರಾಜ್ಯದ ಕೆಲ ಪೊಲೀಸ್ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಶಿಷ್ಯ ಆನಂದಗಿರಿಯೊಂದಿಗಿನ ಮನಸ್ತಾಪದಿಂದಲೇ ಕುಣಿಕೆಗೆ ಕೊರಳೊಡ್ಡಿದ್ರಾ ಮಹಾಂತ್ ನರೇಂದ್ರ ಗಿರಿ?
ಲೌಕಿಕ ಸಂಪತ್ತಿನಿಂದ ದೂರವಿರಲು ಜನರಿಗೆ ಸಲಹೆ ನೀಡುವ ಸಂತರು ತಮ್ಮನ್ನು ತಾವೇ ಭ್ರಮೆಯ ಲೋಕದಲ್ಲಿ ಸಿಲುಕಿಸಿಕೊಂಡಿರುತ್ತಾರೆ. ಇದಕ್ಕೆ ಜೀವಂತ ಪುರಾವೆ ಆಗಿದೆ ದೇವಭೂಮಿ ಉತ್ತರಾಖಂಡ. ಇಲ್ಲಿ, ಕಳೆದ 20 ವರ್ಷಗಳಲ್ಲಿ 22ಕ್ಕೂ ಹೆಚ್ಚು ಸಂತರು ಕೊಲ್ಲಲ್ಪಟ್ಟಿದ್ದಾರೆ. ಅಷ್ಟೇ ಅಲ್ಲ, ಆಸ್ತಿಗೆ ಸಂಬಂಧಿಸಿದಂತೆ ಉತ್ತರಾಖಂಡದ ವಿವಿಧ ನ್ಯಾಯಾಲಯಗಳಲ್ಲಿ ಸಾಧು - ಸಂತರ ಸಾವಿರಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆಗಳು ನಡೆಯುತ್ತಿವೆ.
ಕೆಲವು ಗಮನಾರ್ಹ ಸಾಧು - ಸಂತರ ಹತ್ಯೆಗಳು
- 1991- ಅಕ್ಟೋಬರ್ 25 ರಂದು ರಾಮಾಯಣ ಸತ್ಸಂಗ ಭವನದಿಂದ ಪಾದಯಾತ್ರೆ ಹೊರಟಿದ್ದ ಸಂತ ರಾಘವಾಚಾರ್ಯ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.
- 1993 - ಡಿಸೆಂಬರ್ 9ರಂದು ರಾಮಾಯಣ ಸತ್ಸಂಗ ಭವನದ ಸಂತ ರಾಘವಾಚಾರ್ಯ ಆಶ್ರಮದ ರಂಗಾಚಾರ್ಯ ಅವರನ್ನು ಜ್ವಾಲಾಪುರದಲ್ಲಿ ಹತ್ಯೆ ಮಾಡಲಾಯಿತು.
- 2000- ಫೆಬ್ರವರಿ 1ರಂದು ಗಿರೀಶ್ ಚಂದ್ ಟ್ರಸ್ಟ್‌ನ ಸದಸ್ಯ ರಮೇಶ್ ಜೊತೆ ನ್ಯಾಯಾಲಯಕ್ಕೆ ಹೋಗುತ್ತಿದ್ದಾಗ ಹಿಂದಿನಿಂದ ಜೀಪ್ ಬಂದು ಗುದ್ದಿ ಸಾಯಿಸಿತ್ತು. ಈ ಸಂಬಂಧ ಸ್ವಾಮಿ ನಾಗೇಂದ್ರ ಬ್ರಹ್ಮಚಾರಿ ಅವರನ್ನು ಆರೋಪಿ ಎಂದು ಪರಿಗಣಿಸಿ ಪೊಲೀಸರು ಬಂಧಿಸಿದ್ದರು.
- 2000 - ಡಿಸೆಂಬರ್ನಲ್ಲಿ ಸಾಧ್ವಿ ಪ್ರೇಮಾನಂದರ ಹತ್ಯೆ
- 2001 -ಏಪ್ರಿಲ್ 5ರಂದು ಬಾಬಾ ಸುತೇಂದ್ರ ಬಂಗಾಳಿ ಅವರನ್ನು ಹತ್ಯೆ ಮಾಡಲಾಗಿತ್ತು.
- 2001 - ಜೂನ್ 6ರಂದು ಹರ್ಕಿ ಪೈಡಿಯಲ್ಲಿ ಬಾಬಾ ವಿಷ್ಣುಗಿರಿ ಸೇರಿದಂತೆ ನಾಲ್ಕು ಸಾಧುಗಳನ್ನು ಕೊಲ್ಲಲಾಯಿತು
- 2001 - ಜೂನ್ 26ರಂದು ಬಾಬಾ ಬ್ರಹ್ಮದಾಸ್ ಅವರನ್ನು ಗುಂಡಿಕ್ಕಿ ಹತ್ಯೆ ಹಾಗೂ ಅದೇ ದಿನ ಬಾಬಾ ಬ್ರಹ್ಮಾನಂದನ ಅವರನ್ನು ಸಾಯಿಸಲಾಗಿತ್ತು
- 2002 -ಆಗಸ್ಟ್ 17ರಂದು ಬಾಬಾ ಹರಿಯಾನಂದ ಮತ್ತು ಅವರ ಶಿಷ್ಯರ ಹತ್ಯೆ ಮತ್ತು ಅಂದೇ ಇನ್ನೊಬ್ಬ ಸಂತ ನರೇಂದ್ರ ದಾಸ್ ಕೂಡ ಹತ್ಯೆಗೀಡಾದರು
- 2003 - ಆಗಸ್ಟ್ 6ರಂದು ನಾಪತ್ತೆಯಾಗಿದ್ದ ಸಂಗಂಪುರಿ ಆಶ್ರಮದ ಖ್ಯಾತ ಸಂತ ಪ್ರೇಮಾನಂದ್ ಅಲಿಯಾಸ್ ಭೋಲೆ ಬಾಬಾ ಅವರು ಮೃತಪಟ್ಟಿದ್ದು, 2007 ರ ಸೆಪ್ಟೆಂಬರ್ 07 ರಂದು ಬೆಳಕಿಗೆ ಬಂದಿತ್ತು.
- 2004 - ಡಿಸೆಂಬರ್ 28 ರಂದು, ಸಂತ ಯೋಗಾನಂದರ ಹತ್ಯೆ
- 2006 - ಮೇ 15 ರಂದು ಪಿಲಿ ಕೋಠಿಯ ಸ್ವಾಮಿ ಅಮೃತಾನಂದರ ಹತ್ಯೆ
- 2006 - ನವೆಂಬರ್ 25 ರಂದು ಸಾಧುವೊಬ್ಬರ ಗುಂಡಿಕ್ಕಿ ಹತ್ಯೆ
- 2008- ಫೆಬ್ರವರಿ 08 ರಂದು, ನಿರಂಜನಿ ಅಖಾರದ 7 ಸಾಧುಗಳಿನ್ನು ವಿಷವುಣಿಸಿ ಕೊಲ್ಲಲಾಗಿತ್ತು.
- 2012 - ಏಪ್ರಿಲ್ 14ರಂದು ನಿರ್ವಾನಿ ಅಖಾರಾದ ಮುಖ್ಯಸ್ಥರಾದ ಅಸಿನ್ ಮಹಂತ್ ಸುಧೀರ್ ಗಿರಿ ಅವರ ಹತ್ಯೆ
- 2012- ಜೂನ್ 26ರಂದು ತ್ರಿವಳಿ ಕೊಲೆ ಪ್ರಕರಣವು ಇಡೀ ಉತ್ತರಾಖಂಡವನ್ನು ಬೆಚ್ಚಿ ಬೀಳಿಸಿತ್ತು. ಹರಿದ್ವಾರದ ಲಕ್ಸರ್‌ನಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಮೂವರು ಸಂತರು ಹತರಾಗಿದ್ದು.