ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ ಬರೋಬ್ಬರಿ 20 ಸಾವಿರ ಮಂದಿ - beggers

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುಮಾರು 20 ಸಾವಿರ ಮಂದಿ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ ಎಂಬ ವಿಷಯವನ್ನು ಸಮಾಜ ಕಲ್ಯಾಣ ಇಲಾಖೆ ನಡೆಸಿದ ಸಮೀಕ್ಷೆ ವರದಿ ಬಹಿರಂಗಪಡಿಸಿದೆ.

delhi
ಭಿಕ್ಷಾಟನೆ

By

Published : Nov 1, 2021, 9:47 PM IST

ನವದೆಹಲಿ:ಸಮಾಜ ಕಲ್ಯಾಣ ಇಲಾಖೆ ನಡೆಸಿದ ಸಮೀಕ್ಷೆಯ ಪ್ರಕಾರ, ದೆಹಲಿಯಲ್ಲಿ ಒಟ್ಟು 20,719 ಜನರು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. (PEAB) ಪೂರ್ವ ದೆಹಲಿಯಲ್ಲಿ ಅತಿ ಹೆಚ್ಚು ಅಂದರೆ 2,797 ಮಂದಿ ಭಿಕ್ಷೆ ಬೇಡುವಲ್ಲಿ ನಿರತರಾಗಿದ್ದಾರೆ.

ಒಟ್ಟು 11 ಜಿಲ್ಲೆಗಳಲ್ಲಿ 53 ಶೇಕಡಾ (10,987) ಪುರುಷರು, 46 ಶೇಕಡಾ (9,541) ಮಹಿಳೆಯರು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಶೇ. ರಷ್ಟು (191) ಮಂದಿ ಟ್ರಾನ್ಸ್‌ಜೆಂಡರ್‌ಗಳು ಎಂದು ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಇನ್‌ಸ್ಟಿಟ್ಯೂಟ್ ಫಾರ್ ಹ್ಯೂಮನ್ ಡೆವಲಪ್‌ಮೆಂಟ್ (ಐಹೆಚ್‌ಡಿ) ಸಹಯೋಗದೊಂದಿಗೆ ನಡೆಸಿದ ಆನ್-ಗ್ರೌಂಡ್ ಸಮೀಕ್ಷೆ ಹೇಳಿದೆ.

"ಬಡತನ ಮತ್ತು ಇತರ ಅನೇಕ ಅಂಶಗಳ ಪರಿಣಾಮವಾಗಿ ವ್ಯಕ್ತಿಯು ಭಿಕ್ಷಾಟನೆಯನ್ನು ಆಶ್ರಯಿಸುತ್ತಾನೆ. ಜನರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳು ಭಿಕ್ಷಾಟನೆಗೆ ಕಾರಣವಾಗುತ್ತವೆ. ಭಿಕ್ಷುಕರು ಸಮಾಜದ ಅತ್ಯಂತ ದುರ್ಬಲ ವರ್ಗ. ಇದನ್ನು ಗಮನದಲ್ಲಿಟ್ಟುಕೊಂಡು, ಅಂತಹ ವ್ಯಕ್ತಿಗಳನ್ನು ಗುರುತಿಸಲು ನಾವು ಪ್ರಾಯೋಗಿಕ ಸಮೀಕ್ಷೆಯನ್ನು ನಡೆಸಿದ್ದೇವೆ ಮತ್ತು ಅವರಿಗೆ ಪುನರ್ವಸತಿ ಕಲ್ಪಿಸುವ ಯೋಜನೆಯನ್ನು ರೂಪಿಸಿದ್ದೇವೆ. ಎಂದು ನಗರದಲ್ಲಿ ಎರಡು ತರಬೇತಿ ಕೇಂದ್ರಗಳು ಮತ್ತು ಕೌಶಲ್ಯ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಸಮಾಜ ಕಲ್ಯಾಣ ಸಚಿವ ರಾಜೇಂದ್ರ ಪಾಲ್ ಗೌತಮ್ ಹೇಳಿದರು. ಈ ಕೇಂದ್ರಗಳನ್ನು ಭಿಕ್ಷೆ ಬೇಡುವವರ ಜೀವನೋಪಾಯಕ್ಕಾಗಿ ಪ್ರಾಯೋಗಿಕ ಯೋಜನೆಯಾಗಿ ಪ್ರಾರಂಭಿಸಲಾಗಿದೆ.

ದೆಹಲಿ ಸರ್ಕಾರದ ಅಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯು, "ದೆಹಲಿಯಲ್ಲಿ ಭಿಕ್ಷುಕರ ಪುನರ್ವಸತಿಗಾಗಿ ಸಮಗ್ರ ಕಾರ್ಯಕ್ರಮವನ್ನು ಪ್ರಾರಂಭಿಸಿದೆ, ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸುವ ಮೂಲಕ ರಾಷ್ಟ್ರ ರಾಜಧಾನಿಯನ್ನು ಭಿಕ್ಷಾಟನೆ ಮುಕ್ತ ನಗರವನ್ನಾಗಿ ಮಾಡುವ ಉದ್ದೇಶದಿಂದ ಮತ್ತು ಅವರಿಗೆ ತರಬೇತಿ ಮತ್ತು ಕೌಶಲ್ಯ ಕೊಟ್ಟು ಉದ್ಯೋಗದ ಅವಕಾಶಗಳನ್ನು ಒದಗಿಸುತ್ತದೆ" ಎಂದು ಸಚಿವರು ಹೇಳಿದರು. "ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಪುನರ್ವಸತಿ ಮತ್ತು ನೆಲೆಸಲು ಸುಸ್ಥಿರ ಮಾದರಿಯನ್ನು ರಚಿಸುವುದು ಯೋಜನೆಯ ಗುರಿಯಾಗಿದೆ" ಎಂದು ಅವರು ಹೇಳಿದರು.

ABOUT THE AUTHOR

...view details