ಕರ್ನಾಟಕ

karnataka

ಆಫ್ಘನ್​​ನ ರಾಯಭಾರ ಕಚೇರಿಯಲ್ಲಿ 200 ಭಾರತೀಯರು... ರಕ್ಷಣೆಗೆ ಧಾವಿಸಿದ ಏರ್​​​ಫೋರ್ಸ್​ ವಿಮಾನ

By

Published : Aug 16, 2021, 7:55 PM IST

ಆಫ್ಘನ್​ನಲ್ಲಿ ಸೇನಾ ಸಿಬ್ಬಂದಿ ಸೇರಿ 200 ಕ್ಕೂ ಅಧಿಕ ಮಂದಿ ಸಿಲುಕಿರುವ ಮಾಹಿತಿ ಲಭ್ಯವಾಗಿದೆ. ಅವರನ್ನು ಕರೆತರಲು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಅಫ್ಘಾನ್​ನ ಭಾರತದ ರಾಯಭಾರ ಕಚೇರಿಯಲ್ಲಿ ಸಿಲುಕಿದ 200 ಕ್ಕೂ ಅಧಿಕ ಮಂದಿ
ಅಫ್ಘಾನ್​ನ ಭಾರತದ ರಾಯಭಾರ ಕಚೇರಿಯಲ್ಲಿ ಸಿಲುಕಿದ 200 ಕ್ಕೂ ಅಧಿಕ ಮಂದಿ

ನವದೆಹಲಿ: ಆಫ್ಘನ್​ನಲ್ಲಿ ತಾಲಿಬಾನ್​ ಅಟ್ಟಹಾಸ ಮಿತಿ ಮೀರಿದ್ದು, ಅಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ 200 ಕ್ಕೂ ಹೆಚ್ಚು ಜನರು ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ. ಕಾಬೂಲ್​ನ ಆಫ್ಘನ್​ನ​ ಸಿಖ್​, ಹಿಂದೂ ಸಮುದಾಯಗಳ ಪ್ರತಿನಿಧಿಗಳೊಂದಿಗೆ ಸಂಪರ್ಕದಲ್ಲಿದ್ದು ನಮ್ಮ ಪ್ರಜೆಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಿದ್ದೇವೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಕಾಬೂಲ್​ನಲ್ಲಿ ಸಿಲುಕಿರುವ ಜನರನ್ನು ಕರೆತರಲು ಭಾರತೀಯ ವಾಯುಸೇನಾ ಸಿಬ್ಬಂದಿ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಸ್ತವ್ಯಸ್ತವಾಗಿರುವ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿಮಾನಗಳನ್ನು ನಿಲ್ಲಿಸಲಾಗಿದೆ. ೠ

ಕರ್ಫ್ಯೂ ಜಾರಿ ಸ್ಥಳಾಂತರದ್ದೇ ಚಿಂತೆ

ತಾಲಿಬಾನ್ ನಗರದಲ್ಲಿ ಕರ್ಫ್ಯೂ ಜಾರಿಯಾಗಿರುವುದರಿಂದ ಭಾರತೀಯ ಮಿಷನ್ ಕಾಂಪೌಂಡ್‌ನಿಂದ ಜನರನ್ನು ವಿಮಾನ ನಿಲ್ದಾಣಕ್ಕೆ ಕರೆ ತರವುದೇ ದೊಡ್ಡ ಸಮಸ್ಯೆಯಾಗಿದೆ. ಅಲ್ಲಿ ಸಿಲುಕಿರುವ ಭಾರತೀಯರಲ್ಲಿ ಐಟಿಬಿಪಿಯ ಸುಮಾರು 100 ಸಿಬ್ಬಂದಿಯಿದ್ದಾರೆ ಎಂದು ತಿಳಿದುಬಂದಿದೆ.

ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿಯನ್ನು ಉನ್ನತ ಮಟ್ಟದಲ್ಲಿ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಆಫ್ಘನಿಸ್ತಾನದಲ್ಲಿ ಭಾರತೀಯರು ಮತ್ತು ನಮ್ಮ ಹಿತಾಸಕ್ತಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬೇರೆ ಮಾರ್ಗ ಬಳಕೆ ಸಾಧ್ಯತೆ


ಅಫ್ಘಾನಿಸ್ತಾನದ ವಾಯುಪ್ರದೇಶ ಮುಚ್ಚಿರುವುದರಿಂದ, ಅಮೆರಿಕದಿಂದ ಬರುವ ಏರ್ ಇಂಡಿಯಾ ವಿಮಾನಗಳು ಬೇರೆ ಮಾರ್ಗವನ್ನು ಅನುಸರಿಸಲಿವೆ ಎಂದು ಮೂಲಗಳು ತಿಳಿಸಿವೆ. AI-126 ವಿಮಾನಗಳು (ಚಿಕಾಗೊ-ನವದೆಹಲಿ) ಮತ್ತು AI-174 (ಸ್ಯಾನ್ ಫ್ರಾನ್ಸಿಸ್ಕೋ-ನವದೆಹಲಿ) ಮಾರ್ಗವಾಗಿ ಬರಲಿವೆ.

ತಾಲಿಬಾನ್​ ಕಾಬೂಲ್​ನನ್ನು ವಶಪಡಿಸಿಕೊಳ್ಳುತ್ತದೆ ಎಂಬ ಮುನ್ಸೂಚನೆಯಿದ್ದರೂ, ಭಾರತ ಸರ್ಕಾರ ತನ್ನ ಪ್ರಜೆಗಳನ್ನು ಸ್ಥಳಾಂತರಿಸುವುದಕ್ಕೆ ಯಾಕೆ ವಿಳಂಬ ಮಾಡಿತು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈಗಾಗಲೇ ಆಫ್ಘನ್​ನಿಂದ ವಿಮಾನಗಳ ಹಾರಾಟ ನಿಷೇಧಿಸಲಾಗಿದೆ.
ಇದನ್ನೂ ಓದಿ: ಮಿಲಿಟರಿ, ಸರ್ಕಾರಿ ಸಂಸ್ಥೆಗಳನ್ನು ವಶಕ್ಕೆ ಪಡೆದುಕೊಂಡ ತಾಲಿಬಾನ್ ಉಗ್ರರು

ಇಂದು ಕಾಬೂಲ್​ ಏರ್ಪೋರ್ಟ್​ನಲ್ಲಿ ಐವರು ಮೃತಪಟ್ಟಿದ್ದಾರೆ. ಅವರು, ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆಯೇ?, ಕಾಲ್ತುಳಿತದಿಂದ ಮೃತಪಟ್ಟಿದ್ದಾರೆಯೇ ಎಂಬ ಮಾಹಿತಿ ಸ್ಪಷ್ಟವಾಗಿಲ್ಲ.

ABOUT THE AUTHOR

...view details