ಕರ್ನಾಟಕ

karnataka

ETV Bharat / bharat

ದೇಶಾದ್ಯಂತ ₹92 ಕೋಟಿಗೂ ಅಧಿಕ ಮೌಲ್ಯದ ನಕಲಿ ನೋಟು ವಶ: ಕೇಂದ್ರ ಸರ್ಕಾರ

ದೇಶದಲ್ಲಿ ನಕಲಿ ನೋಟುಗಳ ಹಾವಳಿ ಜೋರಾಗಿದೆ. 2016-20ರ ಅವಧಿಯಲ್ಲಿ ಒಟ್ಟು 92 ಕೋಟಿಗೂ ಅಧಿಕ ಮೌಲ್ಯದ ನೋಟುಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

fake notes in India
fake notes in India

By

Published : Mar 30, 2022, 5:30 PM IST

ನವದೆಹಲಿ:ನಕಲಿ ನೋಟುಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದಲೇ ದೇಶದಲ್ಲಿ 500, 1000 ಮುಖಬೆಲೆಯ ನೋಟು ಚಲಾವಣೆ ರದ್ದು ಮಾಡಲಾಗಿದೆ. ಈಗಾಗಲೇ 500, 2000 ರೂ. ಹೊಸ ನೋಟುಗಳು ಮುದ್ರಣಗೊಳ್ಳುತ್ತಿದ್ದು, ಈ ಸಂದರ್ಭದಲ್ಲೂ ನಕಲಿ​​ ನೋಟುಗಳ ಹಾವಳಿ ಜೋರಾಗಿರುವುದು ಕಂಡುಬಂದಿದೆ. ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ನಿತ್ಯಾನಂದ ರೈ ಈ ಕುರಿತು ಮಾತನಾಡಿದ್ದು, 2016ರಿಂದ 2020ರ ಅವಧಿಯಲ್ಲಿ ₹92 ಕೋಟಿಗೂ ಅಧಿಕ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದಾಗಿ ತಿಳಿಸಿದರು.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ

ದೇಶದಲ್ಲಿ ಚಲಾವಣೆಯಲ್ಲಿರುವ ನಕಲಿ ನೋಟುಗಳ ಹಾವಳಿ ತಡೆಗಟ್ಟಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮಾತನಾಡುತ್ತಿದ್ದ ವೇಳೆ, 1967ರ ಕಾಯ್ದೆಯಡಿ ನಕಲಿ ಭಾರತೀಯ ನೋಟುಗಳ ಉತ್ಪಾದನೆ ಮತ್ತು ಕಳ್ಳಸಾಗಣೆ ಹಾಗೂ ಚಲಾವಣೆಯನ್ನು ಭಯೋತ್ಪಾದಕ ಕೃತ್ಯ ಎಂದು ಘೋಷಿಸಲಾಗಿದೆ. ಇದೇ ವೇಳೆ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಇದನ್ನೂ ಓದಿ:ಬುರ್ಖಾಧಾರಿ ಮಹಿಳೆಯಿಂದ ಸಿಆರ್​ಪಿಎಫ್​​ ಶಿಬಿರದ ಮೇಲೆ ಬಾಂಬ್​ ಎಸೆತ - ವಿಡಿಯೋ

2016-2020ರ ಅವಧಿಯಲ್ಲಿ 20 ಲಕ್ಷಕ್ಕೂ ಹೆಚ್ಚಿನ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಇದರ ಒಟ್ಟು ಮೌಲ್ಯ 92 ಕೋಟಿ ರೂ. ಎಂದು ಸಚಿವರು ತಿಳಿಸಿದರು. ರಾಜ್ಯಸಭೆಯಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿಯನ್ನು ಉಲ್ಲೇಖಿಸಿರುವ ನಿತ್ಯಾನಂದ ರೈ, 921,780,480 ರೂಪಾಯಿ ಮೌಲ್ಯದ 2,017,427 ನಕಲಿ ನೋಟು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳಿದರು.

2016ರಲ್ಲಿ 15,92,50,181 ರೂಪಾಯಿ ಮೌಲ್ಯದ 2,81,839 ನಕಲಿ ನೋಟು, 2017ರಲ್ಲಿ 28,10,19,294 ರೂಪಾಯಿ ಮೌಲ್ಯದ 3,55,994 ನಕಲಿ ನೋಟು, 2018ರಲ್ಲಿ 17,95,36,992 ಮೌಲ್ಯದ 2,57,243 ನಕಲಿ ನೋಟು, 2019ರಲ್ಲಿ 25,39,09,130 ಮೌಲ್ಯದ 2,87,404 ನಕಲಿ ನೋಟು ಹಾಗೂ 2020ರಲ್ಲಿ 92,17,80,480 ಮೌಲ್ಯದ 8,34,947 ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ದೇಶದಲ್ಲಿ ನಕಲಿ ನೋಟು ಚಲಾವಣೆ ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರಗಳು/ಕೇಂದ್ರದ ಭದ್ರತಾ ಏಜೆನ್ಸಿಗಳು ಎಫ್​​ಸಿಆರ್​ಡಿ ರಚನೆ ಮಾಡಿದ್ದು, ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ತಿಳಿಸಿದ್ದರು.

ABOUT THE AUTHOR

...view details